
- ಲಕ್ಷ್ಮೇಶ್ವರ:ಸಾಲಭಾಧೆ ತಾಳಲಾರದೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ರೈತನೋರ್ವ ಆತಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಹೌದು,,, ಇಂತದ್ದೊಂದು ಘಟನೆ ಯಳವತ್ತಿ ಯಲ್ಲಿ ನಡೆದಿದ್ದು ಮೃತನ ಹೆಸರು ಚನ್ನ ಬಸಯ್ಯ ವಿರೂಪಾಕ್ಷಯ್ಯ ಚಿಕಮಠ ವಯಾ(೪೦) ವರ್ಷ ಕೃಷಿ ನಂಬಿಕೊಂಡು ಬಂದಿದ್ದ ಚನ್ನಬಸಯ್ಯ ಕೃಷಿ ಗೆ ಬ್ಯಾಂಕಿನಲ್ಲಿ ಹಾಗೂ ಊರಿನಲ್ಲಿ ಸಾಲ ಪಡೆದಿದ್ದು ಸರಿಯಾದ ಬೆಳೆ ಕೈಗೆ ಸಿಗದೆ ಸಾಲ ತೀರಿಸಲು ಆಗದೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರ ಕುಟುಂಬಸ್ತರಿಂದ ತಿಳಿದು ಬಂದಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದರು.