


ಅರಸೀಕೆರೆ ತಾಲೂಕಿನ ಪುಣ್ಯಕ್ಷೇತ್ರ ಮಾಡಾಳು ಗ್ರಾಮದ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿಯವರ ದೇವಾಲಯದಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರು ಹಾಗೂ ಗ್ರಾಮದ ಆರಾಧ್ಯ ದೈವ ಚನ್ನಬಸವೇಶ್ವರ ಸ್ವಾಮಿ ಸಮ್ಮುಖದಲ್ಲಿ ದೊಡ್ಡ ಮಂಗಳಾರತಿ ವಿಶೇಷ ಪೂಜಾ ಕಾರ್ಯಕ್ರಮವು ಶ್ರದ್ದಾ ಭಕ್ತಿಯಿಂದ ಗುರುವಾರ ರಾತ್ರಿವಿಜೃಂಭಣೆಯಿಂದ ನಡೆಯಿತು 166ನೇ ವರ್ಷದ ಜಾತ್ರಾ ಹಾಗೂ ವಿಸರ್ಜನಾ ಮಹೋತ್ಸವದ ಹತ್ತನೆಯ ದಿನದ ಕಾರ್ಯಕ್ರಮವು ಕೋಡಿಮಠ ಮಹಾಸ೦ಸ್ಥಾನ ಹಾಗೂ ಶ್ರೀ ಕ್ಷೇತ್ರ ಮಾಡಾಳು ಗೌರಮ್ಮ ಸೇವಾ ಟ್ರಸ್ಟ್ ಬಹಳ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದು ಈ ಮಹಾಮಂಗಳಾರತಿ ದೇವಿಗೆ ವಿಶೇಷ ಪೂಜೆಯಾಗಿದೆ ಸುಕ್ಷೇತ್ರ ಕೋಡಿಮಠದ ಶ್ರೀಗಳು ಸಂಜೆ ಗೌರಮ್ಮ ದೇವಿ ಮೂಲ ಸನ್ನಿಧಿಗೆ ಆಗಮಿಸಿದಾಗ ಮಹಿಳೆಯರು ಆರತಿ ಬೆಳಗಿ ಶ್ರೀಗಳನ್ನು ಬರಮಾಡಿಕೊಂಡರು ನಂತರ ಮೂಲ ಸನ್ನಿದಿಯಲ್ಲಿ ಪೂಜೆ ಸಲ್ಲಿಸಿದೊಡ್ಡ ಪಲ್ಲಾರದ ಕುಕ್ಕೆಗಳನ್ನು ಹೊತ್ತು ಭಕ್ತರು ಶ್ರೀಗಳು ಹಾಗೂ ಚನ್ನಬಸವೇಶ್ವರ ಸ್ವಾಮಿ ನೇತ್ರತ್ವದಲ್ಲಿ ಉತ್ಸವದ ಮೂಲಕ ಗ್ರಾಮದ ಹೊರಭಾಗದ ಶಿವಬಸವ ಕುಮಾರಸ್ವಾಮಿ ರಸ್ತೆ ಬದಿಗಿರುವ ಮೂಲಸ್ಥಾನ ಗೌರಮ್ಮ ದೇವಿ ದೇವಾಲಯಕ್ಕೆ ಬದಲಾಯಿತು 9 ಗಂಟೆಗೆ ಸರಿಯಾಗಿ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು ಬಳಿಕ ಶ್ರೀ ಶರಣ ಗೌಡಮ್ಮ ದೇವಿಯವರಿಗೆ ಸಂಪ್ರದಾಯದಂತೆ ನಡೆದಿದ್ದ ಸಹಸ್ರಾರ್ ಭಕ್ತರ ಸಮ್ಮುಖದಲ್ಲಿ ಮಹಾ ಮಂಗಳಾರತಿ ಸಲ್ಲಿಸಲಾಯಿತು