ಅಗ್ಗುಂದ :- ಅರಸೀಕೆರೆ ತಾಲ್ಲೂಕು ತಾಲೂಕಿನ ಕಸಬಾ ಹೋಬಳಿ ಅಗ್ಗುಂದ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವೇಮನ್ ಎಸ್. ಆರ್ ರಾಜಶೇಖರ್ ಹಾಗೂ ಉಪಾಧ್ಯಕ್ಷರಾಗಿ ಆಗ್ಗುಂದ ಗೊಲ್ಲರಹಟ್ಟಿ ರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಕೃಷಿಪತ್ತಿನ ಸಹಕಾರ ಸಂಘದ ಹಿಂದಿನ ಅಧ್ಯಕ್ಷರಾದ ವೀರಣ್ಣ ಇವರ ರಾಜೀನಾಮೆಯಿಂದ ಕಾಲಿಯಾದ ಸ್ಥಾನಕ್ಕೆ ಭಾನುವಾರ ಬೊಮ್ಮೇನಹಳ್ಳಿ ಗ್ರಾಮದಲ್ಲಿ ಚುನಾವಣೆ ನಡೆಯಲಾಯಿತು ಅಧ್ಯಕ್ಷರಾಗಿ ವೇಮನ್ ಎಸ್.ಆರ್ ರಾಜಶೇಖರ್ ಹಾಗೂ ಉಪಾಧ್ಯಕ್ಷರಾಗಿ ಗೊಲ್ಲರಹಟ್ಟಿ ರಾಜಪ್ಪ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು ಎಂದು ಚುನಾವಣಾ ಅಧಿಕಾರಿ ಲೀಲಾ ಘೋಷಿಸಿದರು ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದ ಚುನಾವಣೆಯಲ್ಲಿ ಕೃಷಿ ಪತ್ತಿನ ಸಹಕಾರದ ಸಂಘದ ಚುನಾವಣೆಗೆ ಅರಸೀಕೆರೆ ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಧರ್ಮ ಶೇಖರ್. ಆಗ್ಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಿರೀಶ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭೀಮ ನಾಯಕ್ ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಪ್ಪ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳಾದ ಪುಟ್ಟ ಶಂಕರಪ್ಪ ನಂಜುಂಡಪ್ಪ ರಾಜಶೇಖರ್ ಬಿ.ಜಿ ಶಂಕರ ಲಿಂಗಪ್ಪ.ರಂಗಸ್ವಾಮಿ ನಂಜುಂಡಪ್ಪ ದೇವಿರಮ್ಮ.ಚೂಡಾಮಣಿ ಬಸವರಾಜು.ರಾಜಪ್ಪ. ಮುಂತಾದವರು ಭಾಗವಹಿಸಿದ್ದರು ನೂತನ ಅಧ್ಯಕ್ಷರಾದ ವೇಮನ್ ಎಸ್ ಆರ್ ರಾಜಶೇಖರ್ ಮಾತನಾಡಿ ನನ್ನನ್ನು ಅಧ್ಯಕ್ಷನಾಗಿ ಮಾಡಲು ಮೂಲ ಕಾರಣರಾದ ಕರ್ನಾಟಕ ರಾಜ್ಯ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಹಾಗೂ ಅರಸೀಕೆರೆ ಕ್ಷೇತ್ರದ ಶಾಸಕರು ಆದ ಕೆ.ಎಂ ಶಿವಲಿಂಗೇಗೌಡರು ಹಾಗೂ ಚುನಾವಣೆಯಲ್ಲಿ ಸಹಕರಿಸಿದ ನನ್ನೆಲ್ಲ ಸದಸ್ಯರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ ನನ್ನ ಅವಧಿಯಲ್ಲಿ ಸಂಘದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುದಾಗಿ ಹೇಳಿದರು ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವನಾಧಿಕಾರಿ ಕುಮಾರ್ ನೂತನ ಅಧ್ಯಕ್ಷ ಹಾಗೂಉಪಾಧ್ಯಕ್ಷರನ್ನು ಅಭಿನಂದಿಸಿದರು ಅಗುಂದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಎಂ ನಾಗರಾಜ್ ಹಾಗೂ ಕಾರ್ಯದರ್ಶಿ ಪಿ.ಎಸ್ ಈಶ್ವರಪ್ಪ ಹಾಗೂ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಿರೀಶ್ ಹಾಗೂ ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಅರಸೀಕೆರೆ ತಾಲೂಕ ಅಧ್ಯಕ್ಷರಾದ ಎ.ಪಿ ಚಂದ್ರಯ್ಯ ಅಭಿನಂದಿಸಿದರು ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿದರು
