ರೈಲಿನಲ್ಲಿ ವ್ಯಾಪಾರ ನಡೆಸುವ ವ್ಯಕ್ತಿಗಳಿಂದ ಪ್ರಯಾಣಿಕರಿಗೆ ಕಿರಿಕಿರಿ ಕ್ರಮ ಕೈಗೊಳ್ಳದ ರೈಲ್ವೆ ಅಧಿಕಾರಿಗಳು.. ಇತ್ತೀಚೆಗೆ ಬೆಂಗಳೂರಿಗೆ ತೆರಳುವ ವಿಶ್ವಮಾನವ ರೈಲಿನಲ್ಲಿ ಕೆಲವು ಬೋಗಿಗಳಲ್ಲಿ ಪರವಾನಿಗೆ ಇಲ್ಲದೆ ಕುಡಿಯುವ ನೀರು ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಾನು ಅಧಿಕೃತ ಗುತ್ತಿಗೆದಾರಳು ಎಂದು ಹೇಳಿಕೊಂಡಿರುವ ಮಹಿಳೆ ಒಬ್ಬರು ರೈಲೀನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಿತ್ತಾಡಿಕೊಂಡು ಗಲಾಟೆ ಜಗಳ ನಡೆಸಿ ಅರಸೀಕೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ವಿಶ್ವಮಾನವ ರೈಲು ಬೊಗಿಯಲ್ಲಿ ಈ ಮಹಿಳೆಯು ಇಲಾಖೆಗೆ ಹಣ ನೀಡಿ ಅನುಮತಿ ಪಡೆದಿದ್ದೇನೆ ಎಂದು ಮತ್ತೊಬ್ಬ ವ್ಯಕ್ತಿ ರೈಲ್ವೆ ಇಲಾಖೆಯ ಅನುಮತಿ ಪಡೆಯದೆ ವ್ಯಾಪಾರ ವ್ಯವಹಾರ ನಡೆಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದರು ಪ್ರಯಾಣಿಕರ ಎದುರೇ ಈ ಎರಡು ಗ್ಯಾಂಗಿನ ವ್ಯಕ್ತಿಗಳು ಅವಾಚ್ಯ ಪದಗಳಿಂದ ನಿಂದಿಸಿ ಪರಸ್ಪರ ಬೈದಾಡಿಕೊಂಡಿದ್ದರಿಂದ ಪ್ರಯಾಣಿಕರು ಮುಜುಗರ ಪಡುವಂತಾಯಿತು ಇದರಿಂದ ಅರಸೀಕೆರೆ ರೈಲ್ವೆ ಇಲಾಖೆ ಅಧಿಕಾರಿಗಳು ಇಲ್ಲವೇ ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳು ಕೂಡಲೇ ಇಂತಹ ಪ್ರಕರಣಗಳು ನಡೆಯದಂತೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆಗ್ರಹಿಸಿದ್ದಾರೆ