
,
ಬಾಣಾವರದ ಹನುಮಾನ್ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ಮಕ್ಕಳಿಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು , ಕ್ರೀಡಾಕೂಟಗಳನ್ನು ನಡೆಸಲು ಉದ್ದೇಶಲಾಗಿದೆ ಎಂದು ಕ್ಲಬ್ ಅಧ್ಯಕ್ಷರಾದ GVT ಬಸವರಾಜ್ ರವರು ತಿಳಿಸಿದರು , ಕ್ಲಬ್ ನ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಎಲ್ಲಾ ಸದಸ್ಯರಿಗೆ ಶುಭಾಶಯಗಳನ್ನ ತಿಳಿಸಿ ಮಾತನಾಡಿದರು, ಎಲ್ಲರೂ ಒಳ್ಳೆಯ ಸಂಸ್ಕಾರಯುತ ಜೀವನ, ಒಳ್ಳೆಯ ಆರೋಗ್ಯ ಸೇವಾ ಮನೋಭಾವ ದೊಂದಿಗೆ ಬಾಳಲು ಕರೆ ನೀಡಿದರು, ಹನುಮಾನ್ ಕ್ಲಬ್ ಗೆ ತನ್ನದೇ ಆದ ಇತಿಹಾಸವಿದ್ದು ಇದರ ಧ್ಯೇಯೋದ್ದೇಶಗಳನ್ನು ಪೂರೈಸಲು ನೂರಾರು ಜನ ಆಜೀವ ಸದಸ್ಯರಾಗಿ ಸಹಾಯ ಹಸ್ತ ನೀಡಿ ಊರಿನಲ್ಲೇ ಪ್ರಮುಖ ಸೇವಾ ಕೇಂದ್ರವನ್ನಾಗಿ ಮಾಡಿದ್ದಾರೆ , ಕಾರ್ಯದರ್ಶಿಗಳಾದ ಕಮಲ್ ಚಂದ್ ರವರು ಸೇರಿದ ಎಲ್ಲಾ ಸದಸ್ಯರಿಗೆ ಸ್ವತಂತ್ರೋತ್ಸವದ ಶುಭಾಶಯಗಳನ್ನ ತಿಳಿಸಿ ಸಾಮಾಜಿಕ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸಲು ತಿಳಿಸಿದರು , ಸಭೆಯಲ್ಲಿ ಸಹ ಕಾರ್ಯದರ್ಶಿಗಳಾದ ಮಹಾಲಿಂಗರಾಜು ಖಜಾಂಚಿಗಳಾದ ಶ್ರೀಕಾಂತ್ , ಬಾಣಾವರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ಕೆ ಪ್ರಭಾಕರ್ , ಸದಸ್ಯರಾದ ಪರಮಶಿವು , ಸಂಪತ್, ರಂಗನಾಥ್, ಉಮಾಶಂಕರ್ , ಪ್ರಕಾಶ್ , ಜೆ ವಿ ಗುರು ,ಅಣ್ಣಪ್ಪ, ರಾಜೇಶ್, ನಾಗರಾಜ್ , ಉತ್ತಮ್ ಚಂದ್, ಅರುಣ್ ಕುಮಾರ್, ಎನ್ ಬಾಬು , ಇತರರು ಭಾಗವಹಿಸಿದ್ದರು .