

ಅರಸೀಕೆರೆ
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಅರಸೀಕೆರೆ ವತಿಯಿಂದ ನಗರದ ಟಿಪ್ಪು ಸರ್ಕಲ್ ನಲ್ಲಿ 79ನೆ ಸ್ವಾತಂತ್ರ್ಯ ದಿನಾಚರಣೆಯನ್ನು ಸ್ವಾತಂತ್ರ್ಯವನ್ನು ರಕ್ಷಿಸೋಣ . ರಾಷ್ಟ್ರವನ್ನು ಉಳಿಸೋಣ ಎಂಬ ಘೋಷಣೆಯೊಂದಿಗೆ
ಧ್ವಜಾರೋಹಣ ಹಾಗು ಸಭಾ ಕಾರ್ಯಕ್ರಮ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಅರಸೀಕೆರೆ ಕ್ಷೇತ್ರದ ಎಸ್ ಡಿ ಪಿ ಐ ವಿಧಾನಸಭಾ ಅಧ್ಯಕ್ಷರಾದ ಸಯ್ಯದ್ ಅಜ್ಗರ್ ರವರು ಭ್ರಷ್ಠ ಆಡಳಿತಗಾರರು ಹಾಗು ದೌರ್ಜನ್ಯಕಾರಿ ರಾಜಕಾರಣಿಗಳಿಂದ ದೇಶದ ಸ್ವಾತಂತ್ರ್ಯಕ್ಕೆ ಅಪಾಯವಿದ್ದು ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ಧವಾಗುವಂತೆ ಕರೆ ನೀಡಿದರು. ಬಿಲಾಲ್ ಮಸೀದಿಯಾ ಇಮಾಮರಾದ ಖಾದರ್ ಹಜ್ರತ್ ರವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗು ದೇಶಕ್ಕಾಗಿ ಮುಸ್ಲಿಮರ ಕೊಡುಗೆಗಳನ್ನು ಸ್ಮರಿಸಿದರು .ಈ ಸಂದರ್ಭದಲ್ಲಿ 3 ವರುಷದಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಬೈತುಲ್ಮಾಲ್ ಕಮಿಟಿಯಾ ಕಾರ್ಯದರ್ಶಿ ಜೆ ಕೆ ಸದ್ದಾಮ್ ಪಾಶ ರವರಿಗೆ ಕೋಶಾಧಿಕಾರಿ ಕಲೀಮ್ ಖಾನ್ ರವರು ಸನ್ಮಾನಿಸಿದರು. ಅತಿಥಿಗಳಾದ ಬಿಲಾಲ್ ಮಸೀದಿಯಾ ಅಧ್ಯಕ್ಷರಾದ ಇಮ್ರಾನ್ ಸಿದ್ದೀಖಿಯಾ, ಮಸೀದಿಯಾ ಅಧ್ಯಕ್ಷರಾದ ಎನ್ ಟಿ ಸಿ ವಸೀಮ್ ಕಾರ್ಯದರ್ಶಿ ಎಂ ವಸೀಮ್, ಜಾಕಿರೆ-ಮಜ್ಲಿಸ್ ಟ್ರಸ್ಟ್ ಸದಸ್ಯರಾದ ಸಾದಿಖ್ (ಗಬ್ಬರ್) ವೆಲ್ಡರ್ಸ್ ಯೂನಿಯನ್ ಅಧ್ಯಕ್ಷರಾದ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್ ಡಿ ಪಿ ಐ ಉಪಾಧ್ಯಕ್ಷರಾದ ಸಲ್ಮಾನ್ ಪಾಶ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಯ್ಯದ್ ಸದ್ದಾಮ್ ವಂದಿಸಿದರು. ಯಾಸೀನ್ ನಿರೂಪಿಸಿದರು. ಎಸ್ ಡಿ ಪಿ ಐ ಕಾರ್ಯದರ್ಶಿ ನಿಜಾಮುದ್ದೀನ್ ಮತ್ತು ಸಯ್ಯದ್ ಇಮ್ರಾನ್ ನೇತೃತ್ವ ವಹಿಸಿದ್ದರು. ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.