
ಅರಸೀಕೆರೆ ತಾಲ್ಲೂಕು ಗಂಗಾಮತಸ್ಥ ಸಮಾಜದ ಪದಾಧಿಕಾರಿಗಳ ಆಯ್ಕೆ
ತಾಲ್ಲೂಕು ಗಂಗಾಮತಸ್ಥ ಸರ್ವ ಸದಸ್ಯರ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಸರ್ವ ಸದಸ್ಯರ ಸಭೆಯಲ್ಲಿ ಶ್ರೀಯುತ ಡಿ.ಲಕ್ಷ್ಮಣ್ ರವರನ್ನು ಅರಸೀಕೆರೆ ತಾಲ್ಲೂಕು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾ ಗಿದ್ದು
ತಾಲ್ಲೂಕ್ ಉಪಾಧ್ಯಕ್ಷರಾಗಿ ಶ್ರೀಯುತ ಜಾವಗಲ್ ನ ರವಿಶಂಕರ್ ಹಾಗೂ
ಕಣಕಟ್ಟೆ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಸತೀಶ್ ರವರನ್ನ ಆಯ್ಕೆ ಮಾಡಲಾಯಿತು
ಕಾರ್ಯದರ್ಶಿಯಾಗಿ ಬೆಲ್ಲದ ಪುಟ್ಟಸ್ವಾಮಿ
ಖಜಾಂಚಿಯಾಗಿ ಜಾಜೂರಿನ ಸಿದ್ದೇಶ್ ರವರನ್ನು
ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಶುಭಾಷ್ ರವರನ್ನು ಉಳಿದ 13 ಜನರನ್ನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳು ಮಾನ್ಯ ಶಾಸಕರಾದ ಕೆ ಎಂ ಶಿವಲಿಂಗೇಗೌಡ ರವರನ್ನು ಸನ್ಮಾನಿಸಲಾಯಿತು ನಂತರ ಮಾತನಾಡಿದ ಸಂಘದ ಅಧ್ಯಕ್ಷರಾದ ಡಿ ಲಕ್ಷ್ಮಣ್ ರವರು ಗಂಗಾಮತಸ್ಥ ಸಮಾಜದ ಏಳಿಗೆ ಮತ್ತು ಸಂಘಟನೆ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದು ಹೇಳಿದರು….
ವರದಿ : ಎಸ್ ಎನ್ ರವಿ ( ಸುಳದಿಮ್ಮನ ಹಳ್ಳಿ )