
ಟೈಲರ್ ವೃತ್ತಿ ಬಾಂಧವರ ಸಮಸ್ಯೆ ಪರಿಹರಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿಗೆ ನಿಯೋಗ. ಜಯಪ್ರಕಾಶ್ ಹೆಗ್ಡೆ
ಬೆಂಗಳೂರು
ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಅಧಿಕ ಹೊಲಿಗೆ ವೃತ್ತಿಯಿಂದ ತಮ್ಮ ಜೀವನ ನಡೆಸುತ್ತಿದ್ದು ಈ ವೃತ್ತಿಬಾಂಧವರ ಶಾಂತಿಯುತ ಹೋರಾಟ ಸುಮಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದರು ಸಹ ಸರ್ಕಾರ ಗಮನ ಹರಿಸದೆ ಇರುವುದು ನೋವಿನ ಸಂಗತಿ ಆದ್ದರಿಂದ ಕೂಡಲೇ ರಾಜ್ಯ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಮತ್ತು ಕಾರ್ಮಿಕ ಸಚಿವರು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಟೈಲರ್ ಕಾರ್ಮಿಕ ಕಲ್ಯಾಣ ಮಂಡಳಿ ರಚನೆಗೆ ಚರ್ಚೆ ನಡೆಸಲು ಶೀಘ್ರದಲ್ಲಿ ತೆರಳುವುದಾಗಿ ಪ್ರಭಾವಿ ರಾಜಕಾರಣಿ ಹಾಗೂ ಮಾಜಿ ಸಚಿವರಾದ ಜಯಪ್ರಕಾಶ್ ಹೆಗಡೆ ತಿಳಿಸಿದರು.


ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದ ಆವರಣದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ರಜತ ಸಂಭ್ರಮ 25 ಟೈಲರ್ ವೃತ್ತಿಬಾಂಧವರ ಬೃಹತ್ ಸಮಾವೇಶ ಮತ್ತು ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಸಭೆಯಲ್ಲಿ 10,000ಕ್ಕೂ ಹೆಚ್ಚು ವೃತ್ತಿಬಾಂಧವರು ಸೇರಿದ್ದು ಸಂತೋಷ ತಂದಿದೆ ನಿಮ್ಮ ಈ ಶಾಂತಿಯುತ ಹೋರಾಟ ಪ್ರಯೋಜನವಾಗುವುದಿಲ್ಲ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಸಮಯವನ್ನು ಗೊತ್ತುಪಡಿಸಿ ಹೊಲಿಗೆ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ತಮ್ಮ ಹಲವಾರು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆದು ಈ ನಮ್ಮ ಟೈಲರ್ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾಗಿದೆ ಎಂದು ಜಯಪ್ರಕಾಶ್ ಹೆಗಡೆ ತಿಳಿಸಿದರು…

ಸಭೆಯಲ್ಲಿ ಶ್ರೀ ಕೃಷ್ಣ ಮಠದ ಪರ್ಯಾಯ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಮಹಾಸ್ವಾಮಿಜಿಗಳು ಆಶೀರ್ವಚನ ನೀಡಿ ಟೈಲರ್ ವೃತ್ತಿ ಬಹಳ ಪವಿತ್ರವಾದ ಮತ್ತು ಸಾವಿರಾರು ವರ್ಷಗಳ ಇತಿಹಾಸ ಇರುವ ವೃತ್ತಿಯಾಗಿದ್ದು ಈ ವೃತ್ತಿಯನ್ನು ನೆನೆಸಿಕೊಂಡು ಬರುತ್ತಿರುವ ನಿಮಗೆ ಸರ್ಕಾರ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗಲಿ ಇದಕ್ಕೆ ಶ್ರೀಕೃಷ್ಣ ಪರಮಾತ್ಮರ ಆಶೀರ್ವಾದ ತಮ್ಮ ಮೇಲೆ ಸದಾ ಇರಲಿ ಎಂದು ಆಶೀರ್ವಚನ ನೀಡಿದರು.
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ಬೇಡಿಕೆಗಳ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದ ದಯಾನಂದ ಕೋಟಿಯನ್ ನಮ್ಮ ಸಂಘಟನೆ ಮಂಗಳೂರಿನಲ್ಲಿ 1999 ರಲ್ಲಿ ಪ್ರಾರಂಭಗೊಂಡು 2000ನೇ ಇಸ್ವಿಯಲ್ಲಿ ಉಡುಪಿಯಲ್ಲಿ ಪ್ರಾರಂಭವಾಗಿ 25 ವರ್ಷಗಳನ್ನು ಪೂರೈಸುತ್ತಿದ್ದು ರಜತ ಸಂಭ್ರಮ ಟೈಲರ್ ವೃತ್ತಿಬಾಂಧವರ ಸಮಾವೇಶವನ್ನು ಉಡುಪಿಯಲ್ಲಿ ನಡೆಸುತ್ತಿದ್ದು ಈ ಸಮಾವೇಶದ ಮುಖಾಂತರ ಸರ್ಕಾರಕ್ಕೆ ನಮ್ಮ ಸಮಸ್ಯೆಗಳನ್ನು ಕಳುಹಿಸುತ್ತೇವೆ ಸರ್ಕಾರ ಕೂಡಲೇ ಕರ್ನಾಟಕ ಟೈಲರ್ಸ್ ಕಲ್ಯಾಣ ಮಂಡಳಿಯನ್ನು ರಚಿಸಬೇಕು ಇದರ ಮುಖಾಂತರ ವೃದ್ಧಾಪ್ಯ ವೇತನ ವಿಧವಾ ವೇತನ ಮಾಸಾಶನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ಹೊಲಿಗೆ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಜೀವ ವಿಮೆ ಆರೋಗ್ಯ ವಿಮೆ ಈ ಬೇಡಿಕೆಗಳನ್ನು ಈಡೇರಿಸಬೇಕಿದೆ ಟೈಲರ್ ವೃತ್ತಿಯನ್ನು ಕೂಡಲೇ ಜವಳಿ ನಿಗಮಕ್ಕೆ ಸೇರ್ಪಡೆಗೊಳಿಸಿ ಹೊಲಿಗೆ ಯಂತ್ರ ದಾರ ಇನ್ನಿತರ ಟೈಲರ್ಗಳು ಬಳಸುವ ಕಚ್ಚಾ ವಸ್ತುಗಳ ಮೇಲೆ ಸೆಸ್ ವಿಧಿಸಿ ಕರ್ನಾಟಕ ರಾಜ್ಯ ಮೋಟಾರ್ ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ರೀತಿಯಲ್ಲಿ ಟೈಲರ್ ಸಂಘಟನೆಗಳಿಗೂ ಸಹ ಸವಲತ್ತುಗಳನ್ನು ನೀಡಬೇಕಾಗಿದೆ ಇಂದಿನ ಸಮಾರಂಭದಲ್ಲಿ ಸುಮಾರು 10000 ಹೊಲಿಗೆ ಕಾರ್ಮಿಕರು ಸೇರಿದ್ದು ಸಚಿವರು ಈ ಸಮಾರಂಭಕ್ಕೆ ಬರದೇ ಇರುವುದು ತುಂಬ ಶೋಚನೀಯ ಸಂಗತಿ ಎಂದರು ಸಮಾರಂಭದಲ್ಲಿ ಟೈಲರ್ ಅಸೋಸಿಯೇಷನ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಲವಾರು ಮಹನೀಯರಿಗೆ ಸನ್ಮಾನಿಸಲಾಯಿತು ಉಡುಪಿ ಜಿಲ್ಲೆಯ ವಲಯ ಸಮಿತಿ ತಾಲೂಕು ಸಮಿತಿ ಜಿಲ್ಲಾ ಸಮಿತಿ ಹಾಗೂ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಸಂಸ್ಥೆಯ ಹಲವಾರು ಜಿಲ್ಲೆಯ ಪದಾಧಿಕಾರಿಗಳು ಕ್ರಿಯಾಶೀಲರಾಗಿ ಭಾಗವಹಿಸಿದ್ದು ಸಂತೋಷ ತಂದಿತು ಸಮಾರಂಭದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ ಸೋಶಿಯೇಶನ್ ರಾಜ್ಯಾಧ್ಯಕ್ಷರಾದ ಬಿ ಎ ನಾರಾಯಣ. ಕೋಶಾಧಿಕಾರಿಗಳಾದ ರಾಮಚಂದ್ರ. ಉಡುಪಿ ಜಿಲ್ಲಾಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ ಉಡುಪಿ ಜಿಲ್ಲಾ ಕೋಶಾಧಿಕಾರಿಗಳಾದ ಯೋಗೇಶ್ ಕಾಮತ್ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಉಪಸ್ಥಿತರಿದ್ದರು