

ಅರಸೀಕೆರೆ : ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ , ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ವೈದ್ಯಾಧಿಕಾರಿಗಳನ್ನು ಕೌನ್ಸಿಲಿಂಗ್ ಆಧಾರದ ಮೇಲೆ ಹಲವಾರು ಭಾಗಗಳಿಗೆ ವರ್ಗಾವಣೆಗೊಂಡಿರುವ ವೈದ್ಯಾಧಿಕಾರಿಗಳಿಗೆ ಇಂದು ನಗರದ ಆಸ್ಪತ್ರೆ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜನೆ ಮಾಡಲಾಗಿತ್ತು.
. ಸುಮಾರು 20 ವರ್ಷದಿಂದ ಸೇವೆ ಸಲ್ಲಿಸಿದ ಡಾಕ್ಟರ್ ಷಡಕ್ಷರಿಯವರನ್ನು ಶಿವಮೊಗ್ಗ ನಗರಕ್ಕೆ ವರ್ಗಾವಣೆ ಮಾಡಲಾಗಿದ್ದು. ಮತ್ತು ಡಾಕ್ಟರ್ ಡಿಂಪಲ್ ರವರು ಬೆಂಗಳೂರು ನಗರಕ್ಕೆ ವರ್ಗಾವಣೆಗೊಂಡಿರುತ್ತಾರೆ. ಹಾಗೂ ತಾಲೂಕ್ ಆಡಳಿತಾಧಿಕಾರಿಯಾಗಿದ್ದ ಡಾ .ತಿಮ್ಮರಾಜರವರನ್ನು ತಿಪಟೂರು ನಗರಕ್ಕೆ ವರ್ಗಾವಣೆಗೊಂಡಿದ್ದು. ಮತ್ತು ಮಕ್ಕಳ ತಜ್ಞರಾದ ಸುರೇಶ್ ರವರು ಬೆಂಗಳೂರು ನಗರಕ್ಕೆ ವರ್ಗಾವಣೆಯಾಗಿದ್ದಾರೆ.
. ಹಲವಾರು ವರ್ಷಗಳಿಂದ ನಗರದ ಜಯಚಾಮರಾಜೇಂದ್ರ ಆಸ್ಪತ್ರೆ ಮತ್ತು ಹಲವಾರು ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದ ವೈದ್ಯಾಧಿಕಾರಿಗಳಿಗೆ ಸಾರ್ವಜನಿಕರು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಪುನಹ ನಮ್ಮ ತಾಲೂಕಿಗೆ ಮರಳಿ ಬನ್ನಿ ಎಂದು ಧನ್ಯವಾದಗಳು ತಿಳಿಸಿದರು.
. ನೂತನ ತಾ. ಆಡಳಿತಾಧಿಕಾರಿ. ಡಾ ಉಮೇಶ್ ಮಾತನಾಡಿ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು. 25 ,26 ನೇ ಸಾಲಿನಲ್ಲಿ ವರ್ಗಾವಣೆಗೊಂಡಿರುವ ವೈದ್ಯಾಧಿಕಾರಿಗಳು ಸುಮಾರು 20 ವರ್ಷದಿಂದ ಸೇವೆ ಸಲ್ಲಿಸಿದ್ದಾರೆ ಎಂದರೆ ತಾಲೂಕಿನ ಸಾರ್ವಜನಿಕ ವಲಯ ಹಾಗೂ ಆಸ್ಪತ್ರೆ ಸಿಬ್ಬಂದಿ ವರ್ಗ ಅವರಿಗೆ ಉತ್ತಮವಾದ ಸಹಕಾರವನ್ನು ನೀಡಿದೆ ಎಂದು ಭಾವಿಸುತ್ತೇನೆ. ಅದೇ ರೀತಿ ನಾವು ಈ ವರ್ಷದಲ್ಲಿ ವರ್ಗಾವಣೆಗೊಂಡು ತಾಲೂಕಿನ ಸೇವೆ ಸಲ್ಲಿಸಲು ಬಂದಿದ್ದೇವೆ ನಮಗೂ ಸಹ ಅವರಿಗೆ ನೀಡಿದಂತಹ ಸಹಕಾರವನ್ನು ನೀಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು. ನಮ್ಮ ಆಸ್ಪತ್ರೆಯ ಸಿಬ್ಬಂದಿ ವರ್ಗ ಉತ್ತಮವಾದ ಸೇವೆಯನ್ನು ಸಾರ್ವಜನಿಕರಿಗೆ ನೀಡಿದರೆ ಯಾವ ಸಿಬ್ಬಂದಿ ವರ್ಗಕ್ಕೂ ಕುಂದುಬಾರದ ರೀತಿಯಲ್ಲಿ ತಮ್ಮ ತಮ್ಮಗಳ ಸೇವೆಯನ್ನು ಸಲ್ಲಿಸಲು ಸದಾವಕಾಶ ಎಲ್ಲರಿಗೂ ದೊರೆಯುತ್ತದೆ.ಆಸ್ಪತ್ರೆ ಆಡಳಿತ ಕಚೇರಿ ಸೂಪರ್ಡೆಂಟ್ ಸುಧಾಕರ್ , ಮಾಲೇಕಲ್ ತಿರುಪತಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರು ,
ಟಿ ಆರ್ ನಾಗರಾಜು.
ಹಿರಿಯ ಫಾರ್ಮಸಿ ಶಶಿಕುಮಾರ್. ಹೆಚ್ ಬಿ. ಹಿರಿಯ ಸಿಸ್ಟರ್ ತಾರಾ. ಭಾಗೀರಥಿ. ಪಾರ್ವತಿ ಸಿಸ್ಟರ್ ಮಂಜುಳಾ.
ಎಸ್ಎಲ್ಎನ್ ಯೋಗೀಶ್. ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರು ಕೃಷ್ಣಮೂರ್ತಿ. ಬ್ರದರ್ ನಾಗರಾಜ್. ಲೋಕೇಶ್. ಶಿವು. ಉಪಸ್ಥಿತರಿದ್ದರು.