
ಬಾಣಾವರದ ವಾಸವಿ ಜ್ಞಾನ ದೀಪ ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲೆಯ ಅಧ್ಯಕ್ಷರಾದ ಶ್ರೀಮತಿ ಸರೋಜಾ ಗೋವಿಂದರಾಜ್ ರವರು ಧ್ವಜಾರೋಹಣ ನೆರವೇರಿಸಿ ಬಾಣಾವರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ವಿಶ್ವನಾಥ್ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಶಾರದಮ್ಮ ರವರಿಗೆ ಅವರ ಕಾರ್ಯ ವೈಖರಿಗಳನ್ನು ಮೆಚ್ಚಿ ಅವರುಗಳಿಗೆ ಸನ್ಮಾನಿಸಿದರು , ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಸಂಸ್ಕಾರಯುತ ಜೀವನ ಮತ್ತು ನಡವಳಿಕೆಗಳು ಸ್ವಾತಂತ್ರ್ಯ ಹೋರಾಟಗಾರರ ವಿಷಯಗಳನ್ನು ತಿಳಿಸಿದರು , ಸನ್ಮಾನಿತರು ಧನ್ಯವಾದಗಳು ತಿಳಿಸಿ ಸ್ವಾತಂತ್ರ್ಯ ದಿನದ ಶುಭಾಶಯಗಳು ತಿಳಿಸಿದರು , ಸಭೆಯಲ್ಲಿ ಕಾರ್ಯದರ್ಶಿಗಳಾದ ಶ್ರೀಕಾಂತ್, ನಿರ್ದೇಶಕರಾದ ಶ್ರೀಮತಿ ಗೀತಾ , ಗುರುಮೂರ್ತಿ, ಡಾ. ಸುಜನ್ ,ಡಾ. ಸೂರ್ಯ ,ನಾಗಶ್ರೀ , ಮುಖ್ಯೋಪಾಧ್ಯಾಯನಿಯಾದ ಉಷಾದೇವಿ ,ಶಿಕ್ಷಕರಾದ ಗಗನ , ಲಕ್ಷ್ಮಿ, ಶ್ರುತಿ ,ನೇತ್ರಾವತಿ, ಶೀತಲ್ , ಮಾನಸ, ನಿರ್ಮಲ, ವೀಣಾ , ದೀಪಿಕಾ, ಗಗನರಾಜ್,ಹಲವು ಪೋಷಕರು ಸಾರ್ವಜನಿಕರು ಭಾಗವಹಿಸಿದ್ದರು .