
- ಚಿಕ್ಕಮಗಳೂರಿನಲ್ಲಿ ಅಂತರ್ ರಾಜ್ಯ ವಲಸೆ ಕಾರ್ಮಿಕರ ಕುರಿತು, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು, ಮಾದಕ ದ್ರವ್ಯಗಳ ಸೇವನೆಯ ಕುರಿತು ಚಿಕ್ಕಮಗಳೂರಿನ ಮಾನ್ಯ ಸಹಾಯಕ ಕಾರ್ಮಿಕ ಆಯುಕ್ತರ ಕಛೇರಿಯಲ್ಲಿ ಕಾಫಿ ತೋಟದ ಮಾಲೀಕರಿಗೆ, ರೆಸಾರ್ಟ್ ಹಾಗೂ ಹೋಂ ಸ್ಟೇ ಗಳ
ಮಾಲೀಕರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಪ್ರಾದೇಶಿಕದ ಉಪ ಕಾರ್ಮಿಕ ಆಯುಕ್ತರಾದ ಶ್ರೀ ಎಚ್ ಎಲ್ ಗುರುಪ್ರಸಾದ್ ರವರು ವಹಿಸಿದ್ದರು, ಕೈಗಾರಿಕಾ ಬಾಂಧವ್ಯ ಅಧಿಕಾರಿಯದ ಶ್ರೀ ಕುಶಾಲಪ್ಪ ರವರು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಚಿಕ್ಕಮಗಳೂರು, ಅಡಿಷನಲ್ ಎಸ್ಪಿರವರು, ಹಿರಿಯ ಕಾರ್ಮಿಕ ನಿರೀಕ್ಷಕರಗಳು ಉಪಸ್ಥಿತರಿದ್ದರು,