September 11, 2025
IMG-20250531-WA0031

*ಕಾರ್ಮಿಕ ಇಲಾಖೆ ವತಿಯಿಂದ ಶಾಸಕ ಶಿವಲಿಂಗೇಗೌಡರಿಂದ ಚೆಕ್ ವಿತರಣೆ*

 

ಅರಸೀಕೆರೆ ತಾಲೂಕು ಬಾಣಾವರ ಹೋಬಳಿಯ ತಿಮ್ಮನಹಳ್ಳಿ ಗ್ರಾಮದ ಶ್ರೀ ಮಂಜಪ್ಪ ಎಂಬ ಕಟ್ಟಡ ಕಾರ್ಮಿಕರು ಮರಣ ಹೊಂದಿದ್ದು, ಅವರ ನಾಮನಿರ್ದೇಶನ ಪತ್ನಿಯಾದ ಶ್ರೀಮತಿ ರತ್ನಮ್ಮ ಇವರಿಗೆ ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡಲಾಗುವ ರೂ 75,000-00 ಗಳ ಮಂಜೂರಾತಿ ಆದೇಶದ ಪ್ರತಿಯನ್ನು ಮಾನ್ಯ ಶಾಸಕರು ಅರಸೀಕೆರೆ ವಿಧಾನಸಭಾ ಕ್ಷೇತ್ರ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಎಂ.ಜಿ.ಸಂತೋಷ್ ಕುಮಾರ್-ಮಾನ್ಯ ತಹಶೀಲ್ದಾರ್ ಅರಸೀಕೆರೆ, ಶ್ರೀ ಸತೀಶ್-ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅರಸೀಕೆರೆ, ಶ್ರೀಮತಿ ಶಶಿಕಲಾ- ಕಾರ್ಮಿಕ ನಿರೀಕ್ಷಕರು-ಅರಸೀಕೆರೆ, ತಾಲೂಕು ಗ್ಯಾರಂಟಿ ಕಮಿಟಿಯ ಅಧ್ಯಕ್ಷರಾದ ಶ್ರೀ ಧರ್ಮಶೇಖರ್, ಮಂಡಳಿಯ ಸಿಬ್ಬಂದಿ ಅನಿಲ್ ಮತ್ತು ತಾಲೂಕು ಮಟ್ಟದ ಇತರೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು