September 11, 2025

ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಕಾಪಾಡುವಂತೆ ಆದಿಕಾರಿಗಳಿಗೆ ಸೂಚಿಸಿದ ಎಮ್ ಸಮೀವುಲ್ಲಾ

ಅರಸೀಕೆರೆ
ಅರಸೀಕೆರೆ ನಗರಾದ್ಯಂತ ರಸ್ತೆ ಡಾಂಬರೀಕರಣ ಚರಂಡಿ ನಿರ್ಮಾಣ ಕಾರ್ಯ ರಾಜ ಕಾಲುವೆಗಳ ಕಾರ್ಯ ನಡೆಯುತ್ತಿದ್ದು ಇದರ ಗುಣಮಟ್ಟವನ್ನು ಕಾಯ್ದುಕೊಂಡು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಅರಸೀಕೆರೆ ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ನಗರಸಭೆಯ ಅಧಿಕಾರಿಗಳಿಗೆ ತಮ್ಮ ಕಚೇರಿಯಲ್ಲಿ ಸೂಚಿಸಿದರು

ನಗರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಚರಂಡಿ ಮತ್ತು ರಸ್ತೆ ಬದಿಯಲ್ಲಿ ನೀರು ಹಾದು ಹೋಗಲು ಸುಗಮ ವ್ಯವಸ್ಥೆಯಾಗಲು ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿದ್ದು ಇದರ ಗುಣಮಟ್ಟವನ್ನು ಅಧಿಕಾರಿಗಳು ಭೇಟಿ ನೀಡಿ ಸರಿಯಾದ ರೀತಿಯಲ್ಲಿ ವೀಕ್ಷಿಸಿ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು ಇಂದು ಬೆಳಗ್ಗೆ ನಗರ ಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಜೊತೆ ಮಾತನಾಡಿದ ಅಧ್ಯಕ್ಷರಾದ ಎಮ್

ಸಮೀವುಲ್ಲಾ ಸಾರ್ವಜನಿಕರಿಂದ ಯಾವುದೇ ದೂರುಗಳು ಬರದೇ ರೀತಿಯಲ್ಲಿ ನಾಗರೀಕರ ಸ್ವತ್ತುಗಳ ಈ ಸ್ವತ್ತು ಮತ್ತು ಖಾತೆ ಬದಲಾವಣೆ ಅರ್ಜಿ ಬಂದರೆ ಅವುಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು

ಬಾಕಿ ಇರುವ ಈ ಸ್ವತ್ತು ಪತ್ರಗಳನ್ನು ಶೀಘ್ರದಲ್ಲೇ ಶಾಸಕರು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರಾದ ಕೆ ಎಮ್ ಶಿವಲಿಂಗೇಗೌಡರನ್ನು ನಗರಸಭೆಗೆ ಆಹ್ವಾನ ನೀಡಿ ಅವರ ಕಡೆಯಿಂದ ಈ ಸ್ವತ್ತು ದಾಖಲೆಗಳನ್ನು ನಾಗರಿಕರಿಗೆ ವಿತರಿಸಲಾಗುವುದು ಈವರೆಗೆ ಅರಸೀಕೆರೆ ನಗರದ ನಾಗರಿಕರು ಖಾತೆ ಬದಲಾವಣೆ ಮತ್ತು ಈ ಸ್ವತ್ತು ಪಡೆಯಲು ಅನುಭವಿಸುತ್ತಿದ್ದ ತೊಂದರೆಯ ನಿವಾರಣೆಗಾಗಿ ನಗರಸಭೆಯ ಎಲ್ಲಾ ಸಿಬ್ಬಂದಿಗಳು ಶ್ರಮ ವಹಿಸಿ ಕೆಲಸ ನಿರ್ವಹಿಸಬೇಕಾಗಿದೆ ಎಂದರು ನಗರಸಭೆಯಲ್ಲಿ ಕರವಸೂಲಿಗಾರರು ನಗರದ ನಾಗರಿಕರಿಗೆ ಕಚೇರಿಗೆ ಬಂದ ವೇಳೆಯಲ್ಲಿ ಸಿಗುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷರು ಕಚೇರಿ ವೇಳೆಯಲ್ಲಿ ನಗರಸಭೆ ಎಲ್ಲಾ ಸಿಬ್ಬಂದಿಗಳು ಖುದ್ದಾಗಿ ಹಾಜರಿದ್ದು ನಗರದ ನಾಗರೀಕರ ಸಂಪರ್ಕದಲ್ಲಿ ಇರಬೇಕೆಂದು ಅರಸಿಕೆರೆ ನಗರಸಭೆಯ ಅಧ್ಯಕ್ಷರಾದ ಎಂ ಸಮೀವುಲ್ಲಾ ಸೂಚನೆ ನೀಡಿದರು

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು