
ಪ್ರವಾಸಿಗರಿಗೆ ಸೌಲಭ್ಯ-ಅಭಿವೃದ್ಧಿ ಹಿನ್ನಲೆ ಅಧಿಕಾರಿಗಳ ಸಭೆ: ಜಿಲ್ಲಾಧಿಕಾರಿ
ಬೇಲೂರು
ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಹಾಗೂ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಹಿನ್ನಲೆಯಲ್ಲಿ ಶೀಘ್ರದಲ್ಲೆ ಅಧಿಕಾರಿಗಳು, ಪ್ರಮುಖರ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಹೇಳಿದರು.
ಹಾಸನ ಜಿಲ್ಲಾಧಿಕಾರಿಯಾಗಿ ಆಗಮಿಸಿದ ನಂತರ ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿ ಪೂರ್ಣಕುಂಭಸ್ವಾಗತ ಸ್ವೀಕರಿಸಿ ಮಾತನಾಡಿ, ಬೇಲೂರು ವಿಶ್ವಪರಂಪರೆ ಪಟ್ಟಿಗೆ ಸೇರಿದ್ದು ಈ ದೇಗುಲ ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರವಾಸಿಗರ ಆಕರ್ಷಣೆಗೆ ಮೂಲಭೂತ ಸೌಲಭ್ಯ ಒದಗಿಸಬೇಕಿದೆ. ದೇಗುಲದಲ್ಲಿ ಸಂಪ್ರದಾಯದAತೆ ಸ್ವಾಗತಿಸಿದ್ದು ಸಂತೋಷವಾಗಿದೆ. ದೇಗುಲದ ಸಮೀಪವಿರುವ ಶಿಥಿಲಗೊಂಡಿರುವ ನವರಾತ್ರಿ ಮಂಟಪ ಜೀರ್ಣೋದ್ಧಾರ ಹಾಗೂ ಹೊಯ್ಸಳ ಮಹೋತ್ಸವ ನಡೆಸುವ ಕುರಿತು ಪ್ರಸ್ಥಾವನೆ ಕಳಿಸಲಾಗುವುದು. ಹಾಸನದ ಹಾಸನಾಂಭ ದೇಗುಲಕ್ಕು ಬೇಲೂರು ದೇಗುಲಕ್ಕು ಹೋಲಿಕೆ ಮಾಡುವುದು ಸರಿಯಲ್ಲ. ಬೇಲೂರು ಹಳೇಬೀಡು ವಿಶ್ವ ಪ್ರಸಿದ್ಧಿ ಪಡೆದಿದೆ. ಇನ್ನಷ್ಟು ಪ್ರಚಾರದ ಅಗತ್ಯವಿದೆ ಎಂದರು.
ಶೌಚಾಲಯ, ವಾಹನ ನಿಲುಗಡೆ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಗಮನ ಹರಿಸಲಾಗುವುದು. ಅರಣ್ಯಭವನದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಒಳಗೊಂಡAತೆ ಸಭೆ ನಡೆಸಲಾಗಿದ್ದು ಆನೆ ಹಾವಳಿ ತಡೆಗೆ ಯೋಜನೆ ಸಿದ್ದಪಡಿಸಲಾಗುತ್ತಿದೆ. ಬೇಲೂರಿನ ಕೆಲವೊಂದು ಅಭಿವೃದ್ಧಿ ಕಾರ್ಯದ ಕುರಿತು ಪುರಸಭೆ, ಪುರಾತತ್ವ ಇಲಾಖೆ ಅಧಿಕಾರಿಗಳು, ಪ್ರವಾಸೋಧ್ಯಮ, ಮುಜರಾಯಿ ಅಧಿಕಾರಿಗಳು, ಸಮಾಜದ ಪ್ರಮುಖರ ಸಭೆಯನ್ನು ಬೇಲೂರಿನಲ್ಲಿ ಶೀಘ್ರವಾಗಿ ನಡೆಸಲಾಗುವುದು ಎ ಂದು ತಿಳಿಸಿದರು. ಮಾರ್ಗದರ್ಶಿಗಳು ಹಾಗೂ ಅರ್ಚಕರಿಂದ ದೇಗುಲದ ಬಗ್ಗೆ ಕೆಲವೊಂದು ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ತಹಸೀಲ್ದಾರ್ ಶ್ರೀಧರ್ ಕಂಕಣವಾಡಿ, ದೇಗುಲ ಇಒ ಯೋಗೇಶ್, ಬಿಇಒ ರಾಜೇಗೌಡ, ಸಿಡಿಪಿಒ ಇಂಪ, ಎಸ್‌ಐ ಪಾಟೀಲ್ ಇದ್ದರು.
ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲತಾಕುಮಾರಿ ಅವರನ್ನು ಪೂರ್ಣಕುಂಭಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.