September 11, 2025
IMG-20250621-WA0063

ಹೊಯ್ಸಳ ವಿಜಯ ವರದಿ  ವಿಶುಕುಮಾರ್

ಅರಸೀಕೆರೆ ಯಲ್ಲಿ ಎಸ್ ಡಿ ಪಿ ಐ ಪಕ್ಷದ ಸಂಸ್ಥಾಪನ ದಿನಾಚರಣೆ ಆಚರಿಸಲಾಯಿತು .

ಎಸ್ ಡಿ ಪಿ ಐ ಪಕ್ಷದ 17 ನೇ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಅರಸೀಕೆರೆ ಯ ಟಿಪ್ಪು ಸರ್ಕಲ್ ನಲ್ಲಿ ಉಪಾಧ್ಯಕ್ಷರಾದ ಸಲ್ಮಾನ್ ಮತ್ತು ಸೈಯದ್ ಸದ್ದಾಂ ರವರು ಧ್ವಜಾರೋಹಣ ನೆರವೇರಿಸಿದರು.

ಸೋಶಿಯಲ್ ಡೆಮೋಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿ ಪಿ ಐ) ಪಕ್ಷವು ಜೂನ್ 21,2009 ರಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಪಕ್ಷವು 16 ವರ್ಷ ಪೂರೈಸಿ 17 ನೇ ವರ್ಷದ ಸಂಸ್ಥಾಪನ ದಿನಾಚರಣೆ ಆಚರಿಸಲಾಯಿತು.

2014 ರಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಕೋಮು ದ್ವೇಷ ವಿಪರೀತವಾಯಿತು. ಸಮಾನತೆ, ಭದ್ರತೆ ಜಾತಿಗಳ ಮದ್ಯೆ ದ್ವೇಷ ಮುಸ್ಲಿಮರು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ, ಗುಂಪು ಹತ್ಯೆಗಳು ಹೆಚ್ಚಾದವು
ದೇಶದಲ್ಲಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ವಿರೋಧ ಪಕ್ಷಗಳನ್ನು ದಮನಿಸುವ ಷಡ್ಯಂತ್ರವನ್ನು ರಚಿಸಲಾಯಿತು. ದೇಶದಲ್ಲಿ ಮುಸ್ಲಿಮರ ವಿರುದ್ಧ ಕಪ್ಪು ಕಾಯ್ದೆಗಳಾದ ತ್ರಿಬಲ್ ತಲಾಕ್, ಬುರ್ಖಾ, ಹಿಜಾಬ್ ಗೋ ಹತ್ಯೆ, ವಕ್ಫ್ ಮಸೂದೆ ತಿದ್ದುಪಡಿ ಎಂತಹ ಕರಾಳ ಕಾನೂನುಗಳನ್ನು ಜಾರಿ ಮಾಡಿ ,ಅಶಾಂತಿ ಸೃಷ್ಟಿಸಿದ್ದೆ ಬಿಜೆಪಿ ಕಾರ್ಯಕ್ರಗಳಾದವು. ದೇಶದ ಯುವಕರಿಗೆ ನಿರುದ್ಯೋಗ, ಶಿಕ್ಷಣ ವಸತಿ, ಮೂಲಭೂತ ಸೌಕರ್ಯಗಳ ಬಗ್ಗೆ ಯೋಚನೆ ಮಾಡದೆ ಯುವಕರನ್ನು ಜಾತಿ ಮಧ್ಯೆ ವಿಷದ ಬೀಜ ಬಿತ್ತಿ ,ಹೆಣದ ಮೇಲಿನ ರಾಜಕೀಯವೇ ಹೆಚ್ಚಾಯಿತು.

ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಇತರ ಪಕ್ಷಗಳು ಅಲ್ಪಸಂಖ್ಯಾತ ಮುಸ್ಲಿಮರನ್ನು ಹಿಂದುಳಿದವರನ್ನು ದಲಿತರನ್ನು ಕಡೆಗಣಿಸುತ್ತ ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡು ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಈ ದೇಶದಲ್ಲಿ ಎಲ್ಲರಿಗೆ ಸಮಾನತೆಯಿಂದ ಬಾಳುವುದಕ್ಕಾಗಿ ದೇಶವನ್ನು ಭಯ ಮುಕ್ತ ಮತ್ತು ಹಸಿವು ಮುಕ್ತ ದೇಶವನ್ನು ಕಟ್ಟುವ ದ್ಯೇಯ ದೊಂದಿಗೆ ನಮ್ಮ ಸಮುದಾಯದ, ಪಕ್ಷದ ಹಿರಿಯ ಮುಖಂಡರು ದೇಶದಲ್ಲಿ ಎಸ್ ಡಿ ಪಿ ಐ ಪಕ್ಷವನ್ನು ಸ್ಥಾಪಿಸಿ ಸಂಘಟಿಸಿದ್ದಾರೆ. ಈ ಪಕ್ಷವನ್ನು ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದು ಆಗಿದ್ದು ವಿಶೇಷವಾಗಿ ನಮ್ಮ ಯುವ ಸಮೂಹದಾಗಿದೆ ಎಂಬ ಸಂದೇಶವನ್ನು ನೀಡಿದರು. ಈ ಸಮಯದಲ್ಲಿ ಎಲ್ಲರಿಗೂ ಶುಭ ಕೋರುತ್ತಾ ಎಲ್ಲರಿಗೂ ಸಿಹಿ ಹಂಚಲಾಗಿತು.
ಈ ಸಂದರ್ಭದಲ್ಲಿ ಅಸೆಂಬ್ಲಿ ಸದಸ್ಯರಾದ ಸಹ ಕಾರ್ಯದರ್ಶಿ ಯಾದ ನಿಜಾಮ್ ,ಇಮ್ರಾನ್, ಇರ್ಫಾನ್ ಮತ್ತು ಪಕ್ಷದ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು