
ಹೊಯ್ಸಳ ವಿಜಯ ಅರಸೀಕೆರೆ*
ಕೇಂದ್ರ ಸರ್ಕಾರದ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರಾದ ವಿ ಸೋಮಣ್ಣನವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಅರಸೀಕೆರೆ ತಾಲೂಕ್ ಅಧ್ಯಕ್ಷರಾದ ಎ ಜಿ ಕಿರಣ್ ಕುಮಾರ್. ಜಿಲ್ಲಾ ಉಪಾಧ್ಯಕ್ಷರಾದ ಹೇಮಂತ್ ಕುಮಾರ್ ಅವರ ನೇತೃತ್ವದಲ್ಲಿ ಅರಸೀಕೆರೆ ತಾಲೂಕಿನ ಸಾರ್ವಜನಿಕರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಮನವಿ ನೀಡಿದರು
ಅರಸಿಕೆರೆ ರೈಲ್ವೆ ನಿಲ್ದಾಣದಿಂದ ಗೋಡ್ಸೆಡ್ ರಸ್ತೆ ಅಂಚೆ ಇಲಾಖೆ ಮುಂಬಾಗದಿಂದ ಪಿಎನ್‌ಟಿ ಕ್ವಾಟ್ರಸ್ ರಸ್ತೆಯಲ್ಲಿ ರೈಲ್ವೆ ಇಲಾಖೆ ವತಿಯಿಂದ ತಡೆಗೋಡೆಯನ್ನು ಕಟ್ಟಿರುತ್ತಾರೆ ಅದನ್ನು ತೆರವುಗೊಳಿಸಿಕೊಡಲು ತಾವು ಆದೇಶ ಮಾಡಬೇಕಾಗಿ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ
ರೈಲ್ವೆ ಇಲಾಖೆ ವತಿಯಿಂದ ಲಕ್ಷ್ಮಿಪುರ ರ ಮುಂಭಾಗದಿಂದ ಅಂಚೆಕೊಪ್ಪಲು ಕಾಟಿಕೆರೆ ಸಂಪೂರ್ಣ ಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಯಾವುದೇ ರೀತಿಯ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಈ ಭಾಗದ ಜನರು ತುಂಬಾ ತೊಂದರೆ ಎದುರಿಸುತ್ತಿದ್ದು ಇದಕ್ಕೆ ಮೇಲ್ ಸೇತುವೆ ನಿರ್ಮಿಸಿ ಕೊಡಬೇಕೆಂದರು ಅರಸೀಕೆರೆ ಪ್ರಮುಖ ಜಂಕ್ಷನ್ ಆಗಿದ್ದು ಇಲ್ಲಿಗೆ ಹೊರ ಊರುಗಳಿಂದ ಹೆಚ್ಚಿನ ರೀತಿಯಲ್ಲಿ ಪ್ರಯಾಣಿಕರು ಸಂಚರಿಸುವುದರಿಂದ ಅರಸೀಕೆರೆ ರೈಲ್ವೆ ಇಲಾಖೆಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಕ್ತ ರೀತಿಯ ಸಾರ್ವಜನಿಕ ಸೌಲಭ್ಯಗಳನ್ನು ನೀಡದೆ ನಿರ್ಲಕ್ಷ ವೆಸಗಿದ್ದಾರೆ ಎಂದರು ಅಲ್ಲದೆ ರೈಲ್ವೆ ಸಮುದಾಯ ಭವನದ ಮುಂಭಾಗದಿಂದ ರೈಲ್ವೆ ಕೆಳ ಸೇತುವೆ ಸಂಪರ್ಕ ಕಲ್ಪಿಸಿ ನೇರ ರಸ್ತೆಯನ್ನು ಮಾಡಿಸಿಕೊಡಬೇಕೆಂದು ರಕ್ಷಣಾ ವೇದಿಕೆಯ ಮುಖಂಡರು ರೈಲ್ವೆ ಮತ್ತು ಜಲ ಶಕ್ತಿ ಸಚಿವರಾದ ವಿ ಸೋಮಣ್ಣನವರಿಗೆ ಇಂದು ಅರಸೀಕೆರೆಯಲ್ಲಿ ಮನವಿ ಸಲ್ಲಿಸಿದರು