
*ಹೊಯ್ಸಳ ವಿಜಯ ಅರಸೀಕೆರೆ*
ಗುರುವಾರ ಶ್ರೀಮತಿ ಯಮುನಾ, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಹಾಸನ ಜಿಲ್ಲೆ ಇವರ ನೇತೃತ್ವದಲ್ಲಿ ಅರಸೀಕೆರೆ ತಾಲ್ಲೂಕು ಕಾರ್ಯ ವ್ಯಾಪ್ತಿಯಲ್ಲಿನ ಬಾಣಾವರ ಹಾಗೂ ಅರಕೆರೆಯ ಸುತ್ತಮುತ್ತಲಿನ ಜಲ್ಲಿ ಕ್ರಷರ್ ಗಳನ್ನು ಅಂತರ್ ರಾಜ್ಯ ವಲಸೆ ಕಾರ್ಮಿಕ ಕಾಯ್ದೆ ಹಾಗೂ ಇತರೆ ಕಾಯ್ದೆಗಳಡಿಯಲ್ಲಿ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಗುಪ್ತಚರ ಇಲಾಖೆಯ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಶ್ರೀ ಶಿವಸ್ವಾಮಿ, ಶ್ರೀಮತಿ ಶಶಿಕಲಾ, ಕಾರ್ಮಿಕ ನಿರೀಕ್ಷಕರು ಅರಸೀಕೆರೆ, ಬಾಣಾವರ ಪೊಲೀಸ್ ಠಾಣೆ ಹಾಗೂ ಜಾವಗಲ್ ಪೋಲಿಸ್ ಠಾಣೆಯ ಅಧಿಕಾರಿಗಳು ಹಾಜರಿದ್ದರು. ತಪಾಸಣೆಯ ಸಂದರ್ಭದಲ್ಲಿ ಕಂಡು ಬಂದ ಅಂತರ್ ರಾಜ್ಯ ವಲಸೆ ಕಾರ್ಮಿಕರುಗಳ ದಾಖಲೆಗಳನ್ನು ಪರಿಶೀಲನೆ ನಡೆಸಲಾಯಿತು. ಅಂತರ್ ರಾಜ್ಯ ಕಾರ್ಮಿಕರನ್ನು ನೇಮಿಸಿಕೊಂಡಿರುವ ಮಾಲೀಕರುಗಳಿಗೆ ಕಾರ್ಮಿಕರಿಗೆ ಸಂಬಂಧಿಸಿದ ದಾಖಲೆಗಳನ್ನು ಕಾರ್ಮಿಕ ಇಲಾಖೆ ಹಾಗೂ ಸಂಬಂಧ ಪಟ್ಟ ಪೊಲೀಸ್ ಇಲಾಖೆಗೆ ಸಲ್ಲಿಸಿ ತುರ್ತಾಗಿ ಮಾಹಿತಿಗಳನ್ನು ನೀಡುವಂತೆ , ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಯಮುನಾ ಸೂಚನೆ ನೀಡಿದರು.