
ಅರಸೀಕೆರೆ
ಅರಸೀಕೆರೆ ನಗರವನ್ನೇ ಬೆಚ್ಚಿ ಬೀಳಿಸಿದ್ದ ಬಿಹಾರ ರಾಜ್ಯದ ಕಾರ್ಮಿಕರು ಅರಸೀಕೆರೆ ನಗರ ನಿವಾಸಿ ಕಂಟ್ರಾಕ್ಟರ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಮೇರೆಗೆ ನಗರದಲ್ಲಿ ಅಂತರಾಜ್ಯದಿಂದ ಬಂದು ಅರಸೀಕೆರೆಯಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರ ಮಾಹಿತಿಯನ್ನು ಕಲೆಹಾಕಲು ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯೋನ್ಮುಖರಾದ ಕಾರ್ಮಿಕ ನಿರೀಕ್ಷಕರಾದ ಶಶಿಕಲಾ ರಾಷ್ಟ್ರೀಯ ದಾರಿ ಪಕ್ಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಹತ್ತು ಜನ ಕಾರ್ಮಿಕರಿಗೆ ತಮ್ಮ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಬಂದು ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸಿಕೊಂಡು ಮಾಹಿತಿ ನೀಡಬೇಕೆಂದರು
ಅಲ್ಲದೆ ಸ್ಥಳೀಯ ಕಾರ್ಮಿಕರನ್ನು ಇಟ್ಟುಕೊಂಡು ವ್ಯವಹಾರ ನಡೆಸುತ್ತಿರುವ ಎಚ್ ಪಿ ಪೆಟ್ರೋಲ್ ಬಂಕ್ ಮಾಲೀಕರಿಗೆ ಅಂತರಾಜ್ಯ ಕಾರ್ಮಿಕರು ನಮ್ಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂಬ ಪ್ರಮಾಣ ಪತ್ರವನ್ನು ಕಾರ್ಮಿಕ ಇಲಾಖೆಯಿಂದ ಪಡೆದು ಕಡ್ಡಾಯವಾಗಿ ಪ್ರದರ್ಶಿಸಬೇಕೆಂದರು ಪೊಲೀಸ್ ಇಲಾಖೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಶಿವಲಿಂಗಪ್ಪ ಕಾರ್ಮಿಕ ಇಲಾಖೆಯ ಸಿಬ್ಬಂದಿಗಳಾದ ಅನಿಲ್ ಕುಮಾರ್ ಉಪಸ್ಥಿತರಿದ್ದರು
ವ್ಯಾಪಾರ ಕಡ್ಡಾಯ ನೊಂದಣಿಗಾಗಿ ಸೂಚನೆ ಶಶಿಕಲಾ ಕಾರ್ಮಿಕ ನಿರೀಕ್ಷಕರು
ಅರಸೀಕೆರೆ ತಾಲೂಕಿನಾದ್ಯಂತ ವ್ಯಾಪಾರ ಮತ್ತು ಹಲವಾರು ಬಗೆಯ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುತ್ತಿರುವ ಮಾಲೀಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆ ವತಿಯಿಂದ ಪರವಾನಿಗೆ ಪಡೆಯಬೇಕೆಂದು ಹಲವು ಬಾರಿ ತಿಳಿಸಿದ್ದರು ಸಹ ನಿರ್ಲಕ್ಷ ತೋರುತ್ತಿರುವುದು ಕಂಡುಬರುತ್ತದೆ ಈ ರೀತಿ ಮುಂದುವರೆದಲ್ಲಿ ಕಾರ್ಮಿಕ ಇಲಾಖೆಯ ಕಾನೂನಿನ ಅನ್ವಯ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಮತ್ತು ತಮ್ಮ ವ್ಯಾಪಾರ ವಹಿವಾಟು ನಡೆಸುತ್ತಿರುವ ಸ್ಥಳಗಳಲ್ಲಿ ಅಂತರಾಜ್ಯಗಳಿಂದ ಬಂದು ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಬಗ್ಗೆ ಕಾರ್ಮಿಕ ಇಲಾಖೆ ಕಚೇರಿ ವೇ ಳೆಯಲ್ಲಿ ಭೇಟಿ ನೀಡಿ ಮಾಹಿತಿ ನೀಡತಕ್ಕದ್ದು ಎಂದು ಕಾರ್ಮಿಕ ನಿರೀಕ್ಷಕರಾದ ವೈ ಎಲ್ ಶಶಿಕಲಾ ತಿಳಿಸಿದರು