
ಇಂದು ದಿನಾಂಕ 03-06-2025 ರಂದು ಬೆಳಗ್ಗೆ 10.30 ಗಂಟೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ TASK FORCE [ಕಾರ್ಯ ಪಡೆ] ಸಭೆ ಮತ್ತು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಶ್ರೀ ವಿ. ಹನುಮಂತಪ್ಪ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶ್ರೀ ಸುಭಾಷ್ ಎಂ ಆಲದಕಟ್ಟಿ, ಸಹಾಯಕ ಕಾರ್ಮಿಕ ಆಯುಕ್ತರು, ಶ್ರೀ ಸುರೇಶ್ ಬಿ.ಸಿ. ಕಾರ್ಮಿಕ ಅಧಿಕಾರಿಗಳು, ಶ್ರೀ ಎಚ್.ಕೆ. ಪ್ರಭಾಕರ್, ಪ್ರವೀಣ್ ಕುಮಾರ್ ಹಿರಿಯ ಕಾರ್ಮಿಕ ನಿರೀಕ್ಷಕಕರು ಮತ್ತು ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು. ಸಭೆಗೆ ಸಹಾಯಕ ಕಾರ್ಮಿಕ ಆಯುಕ್ತರು/ ಸದಸ್ಯ ಕಾರ್ಯದರ್ಶಿಗಳು ಸ್ವಾಗತಿಸಿದರು ಮತ್ತು ಕಾರ್ಯಸೂಚಿ ರನ್ವಯ ವಾರ್ಷಿಕ ವರದಿ, ಲೆಕ್ಕ ಪರಿಶೋಧನೆಯ ವರದಿ, ದಾಳಿ, ತಪಾಸಣೆ ಮತ್ತು ದಾಖಲಾದ ಪ್ರಕರಣಗಳು, ವಸೂಲಾದ ದಂಡ ಮತ್ತು ಕಾರ್ಪಸ್ ನಿಧಿ ಮತ್ತು ಮುಂದಿನ ಕ್ರಿಯಾ ಯೋಜನೆ ಕುರಿತು ಸಭೆಗೆ ವಿವರಿಸಿದರು. ಕಾರ್ಮಿಕ ಅಧಿಕಾರಿಗಳು TASKFORCE ಸಭೆಗೆ ವಂದನೆಗಳನ್ನು ತಿಳಿಸಿ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.