
*ಹೊಯ್ಸಳ ವಿಜಯ ಚಿಕ್ಕಮಗಳೂರು*
ಇಂದು ಕಾರ್ಮಿಕ ಭವನ ಚಿಕ್ಕಮಗಳೂರು ಇಲ್ಲಿ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್, ಇವರುಗಳ ಸಂಯುಕ್ತ ಆಶ್ರಯದಲ್ಲಿ, ಅಂತರ್ ರಾಜ್ಯ ವಲಸೆ ಕಾರ್ಮಿಕ ಕಾಯ್ದೆ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕ ಕಾಯ್ದೆ 1986 ತಿದ್ದುಪಡಿ ಅಧಿನಿಯಮ 2016 ರ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಶ್ರೀ ಎಚ್. ಎಲ್. ಗುರುಪ್ರಸಾದ್ ಮಾನ್ಯ ಉಪ ಕಾರ್ಮಿಕ ಆಯುಕ್ತರು ಹಾಸನ ಪ್ರಾದೇಶಿಕ ಹಾಸನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಬಿ.ಜಿ. ಕುಶಾಲಪ್ಪ, ವಕೀಲರು ಹಾಗೂ industrial Relationship officer, KPA ಚಿಕ್ಕಮಗಳೂರು ಮತ್ತು ಶ್ರೀ ಸಿ.ಟಿ. ಜಯಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಿಕ್ಕಮಗಳೂರು ರವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಫಿ ತೋಟಗಳ, ರೆಸಾರ್ಟ್ ಗಳ, home stay ಗಳ ಮಾಲೀಕರು, ವ್ಯವಸ್ಥಾಪಕರು, ಮತ್ತು ಕಾರ್ಮಿಕ ಅಧಿಕಾರಿ ಶ್ರೀ ಬಿ. ಸಿ. ಸುರೇಶ್ ಕುಮಾರ್, ಎಲ್ಲಾ ಹಿರಿಯ ಕಾರ್ಮಿಕ ನಿರೀಕ್ಷಕರು ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.