
ಇಂದು ಸಕಲೇಶಪುರದಲ್ಲಿ ನಡೆದ ವಿಶ್ವ ಹಿಂದೂ ಪರಿಷದ್, ಬಜರಂಗದಳ ತಾಲ್ಲೂಕ್ ಬೈಠಕ್ ನಲ್ಲಿ ಮಹೇಂದ್ರ ಕುಮಾರ್ ಅವರನ್ನು ವಿಶ್ವ ಹಿಂದೂ ಪರಿಷದ್ ನಗರ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿಭಾಗ ಕಾರ್ಯದರ್ಶಿ ಮಾಹಿಪ್, ಹಾಸನ ಜಿಲ್ಲಾ ಸಹ ಕಾರ್ಯದರ್ಶಿಗಳಾದ ಕರಡಿಗಾಲ ಹರೀಶ್, ಜಿಲ್ಲಾ ಉಪಾಧ್ಯಕ್ಷರಾದ ಬಾಳೆಗದ್ದೇ ವಿಜಯ ಕುಮಾರ್, ಕಿಶೋರ್ ಶೆಟ್ಟಿ ಬಜರಂಗದಳ ಜಿಲ್ಲಾ ಸಹ ಸಂಯೋಜಕರು, ತಾಲ್ಲೂಕ್ ಅಧ್ಯಕ್ಷರಾದ ಬಿರಡಹಳ್ಳಿ ಬಾಲಕೃಷ್ಣ ಹಾಗೂ ತಾಲ್ಲೂಕ್ ಬಜರಂಗದಳ ಸಹ ಸಂಯೋಜಕ ವಿಷ್ಣು ರಾವ್ ಬಾಳೆಗದ್ದೆ ಹಾಗು ತಾಲೂಕಿನ ಎಲ್ಲಾ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.