ಹೊಯ್ಸಳ ವಿಜಯ ಕೋಲಾರ
35 ಸಾವಿರ ಕೋಟಿ ರೂಗಳ ಎತ್ತಿನಹೊಳೆ ಯೋಜನೆ ರಾಜಕಾರಣಿಗಳ ನಿರ್ಲಕ್ಷದಿಂದ ವಿಳಂಬವಾಗುತ್ತಿದ್ದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ನೀರಾವರಿಯಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಬಯಲುಸೀಮೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಕೆ ನಾರಾಯಣಗೌಡ ಹೇಳಿದರು
ಕೋಲಾರದಲ್ಲಿ ಮಾತನಾಡಿದ ಅವರು
ಎತ್ತಿನಹೊಳೆ ಯೋಜನೆ ಮುಗಿಯುವ ಹಂತದಲ್ಲಿದಿಯೋ ಅಥವಾ ಸಕಲೇಶಪುರದಲ್ಲಿ ನಿಂತು ಹೋಗಿದೆಯೋ ಯಾವುದು ತಿಳಿಯುತ್ತಿಲ್ಲ ಈ ಬಗ್ಗೆ ರಾಜಕಾರಣಿಗಳು ತೀವ್ರ ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ ನಮ್ಮ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜರೂರಾಗಿ ಮುಗಿಸಿಕೊಡಬೇಕು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರೆದಲ್ಲಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳೊಂದಿಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ತೀವ್ರ ಸ್ವರೂಪದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆಯುವ ಟೊಮೊಟೊ ಮತ್ತು ಮಾವಿನ ಸಂಸ್ಕರಣ ಘಟಕವನ್ನು ಕೂಡಲೇ ಪ್ರಾರಂಭಿಸಬೇಕು ಶೀಘ್ರ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಮತ್ತು ಬೆಂಬಲ ಬೆಲೆಯನ್ನು ಘೋಷಿಸಬೇಕು ಇಷ್ಟು ಬೇಡಿಕೆಗಳನ್ನು ಕೂಡಲೇ ನೆರವೇರಿಸಬೇಕೆಂದು ನಾರಾಯಣಗೌಡ ಸರ್ಕಾರಕ್ಕೆ ಒತ್ತಾಯಿಸಿದರು
ನಮ್ಮ ಜಿಲ್ಲೆಗಳನ್ನು ಕಡೆಗಣಿಸುವುದೆಯಾದಲ್ಲಿ ನಮ್ಮ ಜಿಲ್ಲೆಗಳನ್ನು ತೆಗೆದು ಆಂಧ್ರ ಗೆ ಸೇರಿಸಿಬಿಡಿ ಅಗಲಾದರೂ ನೆಮ್ಮದಿಯಿಂದ ಇರುತ್ತೇವೆ ಅದನ್ನು ಬಿಟ್ಟು ಶಾಶ್ವತ ನೀರಾವರಿ ಯೋಜನೆ ಮತ್ತು ನಮ್ಮ ಜಿಲ್ಲೆಗಳಲ್ಲಿ ರೈತರು ಬೆಳೆಯುವ ಮಾವು ಮತ್ತು ಟೊಮೊಟೊಗೆ ಶೀಘ್ರ ಬೆಂಬಲ ಬೆಲೆ ಘೋಷಣೆಗೆ ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಇಲ್ಲದೆ ಇದ್ದಲ್ಲಿ ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿಗಳುನ್ನು ಬಂದ್ ಮಾಡಿ ಬಯಲು ಸೀಮೆ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆಂದು ಕೆ ನಾರಾಯಣಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.