
ಹೊಯ್ಸಳ ವಿಜಯ ಇಳಕಲ್
ಇಳಕಲ್, ಜೂನ್ 13: ಬಾಗಲಕೋಟೆ ಜಿಲ್ಲೆಯ ಇಳಕಲ್ ಸಮೀಪದ ಗೋರಬಾಳ್ ಗ್ರಾಮದಲ್ಲಿರುವ ದೀಪ ಆಕ್ವಾ ಮಿನರಲ್ಸ್ ಕಂಪನಿಯಿಂದ ತಯಾರಿಸಲಾದ ಕ್ಯಾರಿಬೂ ಪೌಚ್ ನೀರಿನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಅಶೋಕ ಪೂಜಾರಿ ಗ್ರಾಹಕರೊಬ್ಬರು ಖರೀದಿಸಿದ ಪೌಚ್‌ನಲ್ಲಿ ನಟ್ಟು ಬೋಲ್ಟ್ ಕಂಡುಬಂದಿದೆ.
ಈ ಘಟನೆ ಇಳಕಲ್ ನಗರದ ಗ್ರಾಹಕರಲ್ಲಿ ಆತಂಕವನ್ನು ಹುಟ್ಟುಹಾಕಿದ್ದು, ಆರೋಗ್ಯ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಈ ಘಟನೆ ಕುರಿತು ಸಂಬಂಧಪಟ್ಟ ಗ್ರಾಹಕರು ಕೂಡಲೇ ಫುಡ್ ಸೇಫ್ಟಿ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪೌಚನ್ನು ವಶಕ್ಕೆ ಪಡೆದು, ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಗ್ರಾಹಕರು ಇಂತಹ ಅಸುರಕ್ಷಿತ ಆಹಾರ ಉತ್ಪನ್ನಗಳ ಕಂಪನಿಗಳ ವಿರುದ್ಧ ತಯಾರಿಕೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಕರವೇ ತಾಲೂಕಾ ಅಧ್ಯಕ್ಷ ಮಹಾಂತೇಶಗೌಡ ಆಗ್ರಹಿಸಿದ್ದಾರೆ.ಅಷ್ಟೇ ಅಲ್ಲದೆ ಕ್ಯಾರಿಬೂ ನೀರನ್ನು ಕುಡಿಯುವಾಗ ಎಚ್ಚರ ಇರಿ ಎಂದು ವಿನಂತಿ ಮಾಡಿಕೊಂಡಿದ್ದಾರೆ