
ಹೊಯ್ಸಳ ವಿಜಯ ಅರಸೀಕೆರೆ
ಅರಸೀಕೆರೆ :- ಗಡಿನಾಡ ಕನ್ನಡಿಗರ ಧ್ವನಿ, ಎಂಇಎಸ್ ಪುಂಡರಿಗೆ ಸಿಂಹ ಸ್ವಪ್ನ ,ಈ ನಾಡು ಕಂಡ ಕನ್ನಡಪರ ದಿಟ್ಟ ಹೋರಾಟಗಾರ ಕನ್ನಡ ಕಲೆ ಸಾಹಿತ್ಯ ಸಂಗೀತ ಪ್ರೋತ್ಸಾಹಕ ಹೀಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರುದು ಬಹುಮುಖ ವ್ಯಕ್ತಿತ್ವ ಎಂದು ಖ್ಯಾತ ವಕೀಲ ವಿವೇಕ್ ಬಣ್ಣಿಸಿದರು.
ತಾಲೂಕು ಹಾಗೂ ನಗರ ಕಾರವೇ ಘಟಕದ ವತಿಯಿಂದ ನಗರದ ಪಿಪಿ ವೃತ್ತದಲ್ಲಿ ಆಯೋಜಿಸಿದ್ದ
ಕಾರಾವೇ ರಾಜ್ಯಾಧ್ಯಕ್ಷ ಟೀ ನಾರಾಯಣಗೌಡ
ರ 58ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಗಡಿ ಭಾಗದ ಕನ್ನಡಿಗರ ಮನೆ ಮನಗಳಲ್ಲಿ ನಾರಾಯಣಗೌಡರ ಫೋಟೋಗಳನ್ನು ಕಾಣಬಹುದು ಇಂಥ ಒಬ್ಬ ಧೀಮಂತ ಹೋರಾಟಗಾರ ನನ್ನು ಅರಸೀಕೆರೆ ರಾಜ್ಯಕ್ಕೆ ಕೊಡುಗೆಯಾಗಿ ನೀಡುವುದು ತಾಲೂಕಿನ ಕೀರ್ತಿಯಾಗಿದೆ ಎಂದರು.ಜಿಲ್ಲಾ ಕರವೇ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ ಸ್ವಾರ್ಥ ರಾಜಕಾರಣ ನೆರೆಹೊರೆ ರಾಜ್ಯಗಳ ಉದ್ಘಾಟತನವನ್ನು ಮೆಟ್ಟಿ ಕನ್ನಡಿಗರ ಅಸ್ಮಿತೆಗಾಗಿ ಸದಾ ಘರ್ಜಿಸುವ ನಾರಾಯಣಗೌಡರ ದಿಟ್ಟ ಹೋರಾಟಗಳು ಹಾಗೂ ಕನ್ನಡ ವಿರೋಧಿಗಳು ನಿದ್ದೆಗಣ್ಣಿನಲ್ಲಿ ಬೆಚ್ಚಿ ಬೀಳುವಂತೆ ಮಾಡುತ್ತದೆ ಇಂಥ ಒಬ್ಬ ಧೀಮಂತ ಹೋರಾಟಗಾರ ನಮ್ಮ ಊರಿನವರು ಎಂಬುದೇ ಹೆಮ್ಮೆಯ ಸಂಗತಿ ಎಂದರು.
ತಾಲೂಕು ಕರವೇ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಕನ್ನಡ ನಾಡು ನುಡಿ ನೆಲ ಜಲ ಹೀಗೆ ಕನ್ನಡಪರ ಹೋರಾಟಗಳಿಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣಗೌಡರ ಹೋರಾಟದ ಮನೋಭಾವವೇ ನಮ್ಮೆಲ್ಲರಿಗೂ ಆದರ್ಶವಾಗಿದೆ
ಅರಸೀಕೆರೆಯವರೇಯಾದ ನಾರಾಯಣಗೌಡರು ನಾಡು ನುಡಿ ನೆಲ ಜಲ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಯಾದ ಸಂದರ್ಭದಲ್ಲಿ ಸಿಡಿದೆಳುವ ನಾರಾಯಣಗೌಡರು ಕನ್ನಡಾಂಬೆಯ ಸುಪುತ್ರ ಎಂದು ಬಣ್ಣಿಸಿದರು.
ನಂತರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ
ಪೇನುಗಳನ್ನು ವಿತರಿಸುವ ಮೂಲಕ ಕರವೇ ಕಾರ್ಯಕರ್ತರು ನಾರಾಯಣಗೌಡರು ಹುಟ್ಟುಹಬ್ಬವನ್ನು ಆಚರಿಸಿದ್ದು ಮತ್ತೊಂದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ನಗರಸಭೆ ಸದಸ್ಯ ವೆಂಕಟಮುನಿ,ಹಾಗೂ ಕರವೇ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.