
27 ಧೂಳಖೇಡ 01 : ಭೀಮಾ ತೀರದ ಗ್ರಾಮಗಳಿಗೆ ಎಚ್ಚರಿಕೆ: ನೀರಾ ಜಲಾಶಯದಿಂದ 26.225 ಸಾವಿರ ಕ್ಯೂಸೆಕ್ ನೀರು ಹರಿ ಬಿಡುಗಡೆ
ಧೂಳಖೇಡ : ಮಹಾರಾಷ್ಟ್ರ ನೀರಾ ಜಲಾಶಯ ಮತ್ತು ಭೀಮಾ ಕಣಿವೆ ಪ್ರದೇಶದಲ್ಲಿ ಕಳೆದ ದಿನಗಳಿಂದ ಬಾರಿ ಪ್ರಮಾಣದಲ್ಲಿ ಮಳೆಯಾಗಿತ್ತಿದ್ದು. ನೀರಾ ಜಲಾಶಯದಿಂದ 26.525 ಸಾವಿರ ಕ್ಯೂಸೆಕ್ ನೀರು ಭೀಮಾನದಿಗೆ ಹರಿ ಬಿಡಲಾಗಿದೆ. ಎಂದು ಚಡಚಣ ತಹಶೀಲ್ದಾರ ಸಂಜಯ ಇಂಗಳೆ ಧೂಳಖೇಡ ಗ್ರಾಮದ ಬ್ಯಾರೇಜ್ ಗೆ ಭೇಟಿ ನೀಡಿ ನದಿ ಪಾತ್ರದ ನೀರಿನ ಮಟ್ಟ ಪರಿಶೀಲನೆ ಮಾಡಿದ ನಂತರ ಗ್ರಾಮಸ್ಥರಿಗೆ ತಿಳಿ ಹೇಳಿದರು.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಹದ ಭೀತಿ ಬರಬಹುದು ಮುನ್ನೆಚರಿಕೆಯಿಂದ ಗ್ರಾಮಸ್ಥರು ಇರಬೇಕು
ಮಹಾರಾಷ್ಟ್ರ ನೀರಾ ಜಲಾಶಯದಿಂದ 26.525 ಕ್ಯೂಸೆಕ್ ನೀರು ಈಗಾಗಲೇ ಬಿಡಗಡೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಸತತವಾಗಿ ಮಳೆ ಇರುವುದರಿಂದ ಯಾವ ಕ್ಷಣವಾದರೂ ನೀರಿನ ಪ್ರಮಾಣ ಹೆಚ್ಚಗಬಹುದು ಎಂದು ಮಾಹಿತಿಯಿದೆ. ಹೀಗಾಗಿ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇದೆ. ಮುನ್ನೆಚರಿಕೆ ಕ್ರಮವಾಗಿ ನದಿ ತೀರದ ಜನರಿಗೆ ತಿಳಿಸಲಾಗಿದೆ. ಜನ ಜಾನುವಾರು , ನೀರಿನ ಪಂಪ್ ಸೆಟ್ ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಹೇಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಪಿ ಜೆ ಕೊಡಹೊನ್ನ, ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕೋಳಿ, ಇದ್ದರು.