September 11, 2025

ಗುಬ್ಬಿ: ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಕಾನೂನುಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂದು ರೆಡ್ಸ್ ಸಂಸ್ಥೆ ಜಿಲ್ಲಾ ಸಂಚಾಲಕ ರಂಗಯ್ಯ ತಿಳಿಸಿದರು.

ತಾಲೂಕಿನ ಚೇಳೂರು ಅಂಬೇಡ್ಕರ್ ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ಪರ್ಯಾಯ ಕಾನೂನು ವೇದಿಕೆ ಹಾಗೂ ಭುವನೇಶ್ವರಿ ಯುವಕ ಸಂಘ ಚೇಳೂರು ಸಹಯೋಗದಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ 1989, ಪಿಟಿಸಿಎಲ್ 1978 ಹಾಗೂ 2013 ಮಲ ಹೊರುವ ನಿಷೇಧ ಕಾಯಿದೆ ಬಗ್ಗೆ ಅರಿವು ಮೂಡಿಸುವ ಗ್ರಾಮಮಟ್ಟದ ಕಾರ್ಯಾಗಾದಲ್ಲಿ ಮಾತನಾಡಿದ ಅವರು,

ಪಿಟಿಸಿಎಲ್ ಕಾಯಿದೆ ಭೂಮಿ ಕಳೆದುಕೊಂಡ ದಲಿತರಿಗೆ ಮರಳಿ ಕೃಷಿ ಭೂಮಿ ನೀಡಿ ಬದುಕು ಕಟ್ಟಿಕೊಡುವ ಕಾಯಿದೆ ಸರಿಯಾಗಿ ಬಳಕೆ ಆಗಬೇಕಿದೆ. ಪರಿಣಾಮಕಾರಿ ಜಾರಿಗೆ ಸರ್ಕಾರಗಳು ಬೆಂಬಲ ಸೂಚಿಸಿಲ್ಲ. ನ್ಯಾಯಾಲಯ ಮೆಟ್ಟಿಲೇರಿರುವ ಈ ಕಾಯಿದೆ ದಲಿತರಿಗೆ ಮರು ಜೀವ ತರಲು ಜಾರಿಗೆ ಒತ್ತಡ ತರಲು ಮೊದಲು ಕಾಯಿದೆ ಬಗ್ಗೆ ತಿಳಿಯಬೇಕು ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಗಾರಗಳು ನಡೆಯಬೇಕಿದೆ ಎಂದರು.

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂತಹ ಕಾರ್ಯಗಾರಗಳು ನಡೆಯಬೇಕಿದ್ದು. ಸಮುದಾಯದ ಯುವ ಜನತೆಗೆ ಕಾನೂನಿನ ಅರಿವು ಅಗತ್ಯವಿದ್ದು. ಸಮುದಾಯದಲ್ಲಿ ವಂಚನೆಗೊಳಗಾದ ಜನರನ್ನು ರಕ್ಷಿಸಬಹುದು ಎಂದು ತಿಳಿಸಿದರು.

ಪರ್ಯಾಯ ಕಾನೂನು ವೇದಿಕೆ ಹೈಕೋರ್ಟ್ ವಕೀಲರಾದ ನರಸಿಂಹಪ್ಪ ಮಾತನಾಡಿ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ತಿಳುವಳಿಕೆ ಇಲ್ಲದ ಜನರಿಗೆ ತಿಳಿ ಹೇಳಿ ಕಾಯಿದೆ ಬಳಕೆ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರದ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಜಿಲ್ಲಾಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಕಾನೂನು ಅರಿವು ಮೂಡಿಸುವ ಕಾರ್ಯಗಾರ ಮಾಡಲು ಸುತ್ತೋಲೆ ಹೊರಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಸದಸ್ಯೆ ಪದ್ಮ, ಸಂಯೋಜಕರಾದ ಮನೋಜ್, ಕಿಶೋರ್, ಪಿಎಸ್ಐ ನಾಗರಾಜು, ಮುಖಂಡರಾದ ಕಚ್ಚೆನಹಳ್ಳಿ ಬಸವರಾಜ್, ರಮೇಶ್, ಕಲಾವಿದ ನರಸಿಂಹಮೂರ್ತಿ, ಮಾದಲಪುರ ಲೋಕೇಶ್, ದೊಡ್ಡಮ್ಮ, ಲಕ್ಕೆನಹಳ್ಳಿ ನರಸಿಯಪ್ಪ, ಪುಟ್ಟರಾಜು, ಸಂತು, ಅಭಿ, ವಿಜಯ್, ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು