
ಅರಸೀಕೆರೆಯ ಸ್ವಾಗತ ಕಮಾನು ನಗರದ ಅಂದವನ್ನು ಹೆಚ್ಚಿಸಿದೆ ಕೆಎಂ ಶಿವಲಿಂಗೇಗೌಡ
ಉದಯವಾಹಿನಿ ಅರಸೀಕೆರೆ
ಅರಸೀಕೆರೆಯಲ್ಲಿ ಪ್ರಮುಖ ನಾಲ್ಕು ಹೆದ್ದಾರಿಗಳನ್ನು ಹೊಂದಿದ್ದು ಈ ಹೆದ್ದಾರಿಗಳಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣದಲ್ಲಿ ಹೋಗುವ ಬರುವಾಗ ರಸ್ತೆಗಳಲ್ಲಿ ಮಾಹಿತಿಯ ಕೊರತೆಯಿಂದ ತೊಂದರೆಯಾಗುತ್ತಿದ್ದು ಅರಸೀಕೆರೆ ನಗರಸಭೆ ವತಿಯಿಂದ ನಾಲ್ಕು ಪ್ರಮುಖ ಹೆದ್ದಾರಿಗಳಲ್ಲಿ ಅರಸೀಕೆರೆಯ ಇತಿಹಾಸ ಮತ್ತು ಆಧ್ಯಾತ್ಮಿಕ ಧಾರ್ಮಿಕ ಇತಿಹಾಸಗಳನ್ನು ತಿಳಿಯಪಡಿಸುತ್ತಾ ಹೆದ್ದಾರಿಗಳು ಯಾವ ನಗರದಡೆ ಸಂಪರ್ಕ ಹೊಂದುತ್ತದೆ ಎಂಬ ಮಾಹಿತಿಯ ಕಮಾನುಗಳನ್ನು ನಾಲ್ಕು ಹೆದ್ದಾರಿಗಳಲ್ಲಿ ನಿರ್ಮಾಣ ಮಾಡಿಸಿ ಇಂದು ಉದ್ಘಾಟನೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ ನಗರ ಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ ನಗರಸಭೆಯ ಸಿಬ್ಬಂದಿಗಳ ಕಾರ್ಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ ಎಂ ಶಿವಲಿಂಗೇಗೌಡ ಶ್ಲಾಘನೆ ವ್ಯಕ್ತಪಡಿಸಿದರು
ನಂತರ ಮಾತನಾಡಿದ ಶಾಸಕರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೀಘ್ರದಲ್ಲಿ ಅರಸಿಕೆರೆ ನಗರಕ್ಕೆ ಆಗಮಿಸಲಿದ್ದು ನಗರಸಭೆಯ ಈಜುಕೊಳ ಫುಡ್ ಕೋರ್ಟ್ ಮಾರ್ಕೆಟ್ . ಅರಸೀಕೆರೆ ನಗರದ ನ್ಯಾಯಾಲಯ ಕಟ್ಟಡ ಹೀಗೆ ಹಲವಾರು ಕಾಮಗಾರಿಗಳ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವರು ಮುಖ್ಯಮಂತ್ರಿಗಳೊಂದಿಗೆ ಹಲವಾರು ಸಚಿವರು ಪಾಲ್ಗೊಳ್ಳುವರು ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದರು ನಗರಸಭೆ ಅಧ್ಯಕ್ಷರಾದ ಎಂ ಸಮಿವುಲ್ಲಾ. ನಗರಸಭೆ ಉಪಾಧ್ಯಕ್ಷರಾದ ಮನೋಹರ್ ಮೇಸ್ತ್ರಿ ಆಯುಕ್ತರಾದ ಕೃಷ್ಣಮೂರ್ತಿ ಸದಸ್ಯರಾದ ಇಮ್ರಾನ್ ಸೇರಿದಂತೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅರುಣ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು
