
ಹೊಯ್ಸಳ ವಿಜಯ ಅರಸೀಕೆರೆ:
ಕೇಂದ್ರ ಸರ್ಕಾರದ ಅಮೃತಮಿತ್ರ 2.0 ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರು ತಮ್ಮ ಕುಟುಂಬದ ತಾಯಿಯ ಹೆಸರಿನಲ್ಲಿ ಒಂದು ಸಸಿಯನ್ನು ಪಾಲನೆ ಪೋಷಣೆ ಮಾಡಿ ದೇಶದ ಪರಿಸರವನ್ನು ಕಾಪಾಡುವಂತೆ ಈ ಕಾರ್ಯಕ್ರಮ ಜಾರಿಗೆ ತಂದಿರುವುದು ಸಂತೋಷದ ವಿಚಾರವಾಗಿದೆ ಸರ್ಕಾರಗಳು ಇದುವರೆಗೂ ಸಹ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡಿ ಪರಿಸರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿರದ್ದರೂ ಸಹ ಅವುಗಳು ಸಾಕಷ್ಟು ಮಟ್ಟಿಗೆ ಯಶಸ್ವಿಯಾಗದೇ ಇರುವುದು ನೋವಿನ ಸಂಗತಿ ಆದ್ದರಿಂದ ಸರ್ಕಾರ ಸ್ಥಳೀಯ ಸಂಸ್ಥೆ ಅಂದರೆ ನಗರ ಸಭೆ ವ್ಯಾಪ್ತಿಗಳಲ್ಲಿನ ಮಹಿಳೆಯರಿಂದ ತಮ್ಮ ತಾಯಿ ಹೆಸರಿನಲ್ಲಿ ಸಸಿ ನೆಡೆಯುವ ಕಾರ್ಯಕ್ರಮವನ್ನು ಜಾರಿಗೊಳಿಸಿರುವುದು ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ನಮ್ಮ ನಗರಸಭೆ ವ್ಯಾಪ್ತಿಯಲ್ಲಿ 5,000 ಸಸಿಗಳನ್ನು ಮಹಿಳೆಯರಿಂದಲೇ ನಡೆಸಿ ಇದಕ್ಕೆ ಪಾಲನೆ ಪೋಷಣೆ ಮಾಡಿ ಪರಿಸರ ಸಂರಕ್ಷಣೆ ಮುಂದಾಗುವಂತೆ . ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಅಧ್ಯಕ್ಷರಾದ ಎಮ್ ಶಮಿವುಲ್ಲಾ. ತಿಳಿಸಿದರು
ಅರಸೀಕೆರೆ ನಗರ ವ್ಯಾಪ್ತಿಯಲ್ಲಿನ ಜೇನುಕಲ್ ಬೆಟ್ಟದ ರಸ್ತೆಯಲ್ಲಿರುವ ನಗರಸಭೆಯ ನೀರು ಶುದ್ಧೀಕರಣ ಘಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು 200 ವಿವಿಧ ಜಾತಿಯ ಸಸಿಗಳನ್ನು ವಿತರಿಸಿ ಮಹಿಳೆಯರು ಈ ದೇಶದ ಆಸ್ತಿ ಮತ್ತು ಶಕ್ತಿ ಸರ್ಕಾರಗಳು ಮಹಿಳೆಯರ ಸ್ವಸಾಯ ಸಂಘಗಳು ಮತ್ತು ಸ್ತ್ರೀಶಕ್ತಿ ಸಂಘಗಳ ಮೂಲಕ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದು ಇದರಲ್ಲೂ ಸಾಕಷ್ಟು ಕಾರ್ಯಕ್ರಮಗಳು ಇದಕ್ಕೆ ಸ್ಪಷ್ಟ ಉದಾರಣೆ ಎಂದರೆ ಅರಸೀಕೆರೆಯಲ್ಲಿ ಹಾಲಿ ಎರಡು ಉದ್ಯಾನವನಗಳನ್ನು ಸರ್ಕಾರದ ಆದೇಶದಂತೆ ಸ್ವಸಹಾಯ ಸಂಘಗಳಿಗೆ ನೀಡಲಾಗಿದ್ದು ಆ ಉದ್ಯಾನವನಗಳ ಮೇಲ್ವಿಚಾರಣೆ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಪರಿಸರ ಹಾಳಾಗುತ್ತಾ ಬರುತ್ತಿದ್ದು ಹಿಂದೆ ಮನೆಗೊಂದು ಕಾಡಿಗೊಂದು ವನ ಎಂಬ ವಚನಗಳಿದ್ದು ಈಗ ಸರ್ಕಾರ ಜಾರಿಗೆ ತಂದಿರುವ ಕುಟುಂಬದ ಯಜಮಾನಿ ಅಂದರೆ ತಾಯಿ ಹೆಸರಿನಲ್ಲಿ ಒಂದು ಸಸಿಯನ್ನು ನಡೆವುದು ಅದನ್ನು ನಿಟ್ಟು ಪಾಲನೆ ಪೋಷಣೆ ಮಾಡಿ ತಾಯಿಯನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಹಾಗೆ ಸಸಿಯನ್ನು ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ನಗರಸಭೆಯ ಅಧ್ಯಕ್ಷರಾದ ಶಮಿವುಲ್ಲಾ ಹೇಳಿದರು ಎಂದರು
ಪ್ರಭಾರ ಪೌರಯುಕ್ತರು ಮತ್ತು ಎ ಇ ಇ. ಸುನಿಲ್ ಕುಮಾರ್ ಕಂದಾಯ ಅಧಿಕಾರಿ ಮಂಜುನಾಥ್. ಸಮುದಾಯ ಸಂಘಟನಾಧಿಕಾರಿಗಳಾದ ರಾಜಶೇಖರ್. ಸಿಆರ್‌ಪಿ ವನಜಾಕ್ಷಿ.. ನಗರಸಭೆ ಉಪಾಧ್ಯಕ್ಷರಾದ ಮನೋಹರ್ ಮೇಸ್ತ್ರಿ. ನಗರಸಭೆ ಸದಸ್ಯರಾದ ದರ್ಶನ್ . ಮತ್ತು ನಾಲ್ಕು ಸ್ವ ಸಹಾಯ ಸಂಘಗಳ ಗುಂಪಿನ ಮಹಿಳೆಯರು ಉಪಸ್ಥಿತರಿದ್ದರು.