
ಹೊಯ್ಸಳ ವಿಜಯ
ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲೂಕಿನ ಸಿಂಗಟಗರೆ ಗ್ರಾಮದ ಪ್ರಖ್ಯಾತ ಶ್ರೀ ಕಲ್ಲೇಶ್ವರ ಸ್ವಾಮಿಯವರ ಬಸವಣ್ಣನವರ ಮೂರನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮ ಸೋಮವಾರ ಅದ್ದೂರಿಯಾಗಿ ಜರುಗಿತು ದಿನಾಂಕ 16. 6. 25. ರಂದು ಸೋಮವಾರ ಬೆಳಗ್ಗೆ ಶ್ರೀ ಬಸವಣ್ಣನವರ ಅಭಿಷೇಕದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಸಿಂಗಟಿಕೆರೆ ಗ್ರಾಮದ ಗ್ರಾಮಸ್ಥರಿಗೆ ಪ್ರಸಾದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು ನಂತರ ಸಂಜೆ ಸಿಂಗಟಗೆರೆ ಗ್ರಾಮದ ಬಸವಣ್ಣ ನವರೊಂದಿಗೆ ಶ್ರೀ ಆಂಜನೇಯ ಸ್ವಾಮಿ ಶ್ರೀ ಪಾರ್ವತಮ್ಮ ಸಹಿತ ಕಲ್ಲೇಶ್ವರ ಸ್ವಾಮಿಯವರ ಮೆರವಣಿಗೆ ಸಿಂಗಟಿಗೆರೆ ಗ್ರಾಮಾದ್ಯಂತ ಅದ್ದೂರಿಯಾಗಿ ನಡೆಯಿತು ಶ್ರೀ ಬಸವೇಶ್ವರ ಸ್ವಾಮಿಯ ಮಂಟಪವನ್ನು ಸಿಂಗಿಟಗೆರೆ ಗ್ರಾಮದವರೇ ಆದ ಶ್ರೀಮತಿ ಶ್ರೀ ಗಂಗಮ್ಮ ಪುಂಡಲೀಕ ರಾವ್ ರವರು ನಿರ್ಮಾಣ ಮಾಡಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು